ನವದೆಹಲಿ : ಚೀನಾ ಸಂಶೋಧಿಸಿರುವ ಕೊರೋನಾ ಲಸಿಕೆಯನ್ನು ಪಡೆದಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಶನಿವಾರ ಇಮ್ರಾನ್ ಖಾನ್ ಅವರಿಗೆ ಸೋಂಕು ಇರುವುದು ಖಚಿತಪಟ್ಟಿದ್ದು, ಮನೆಯಲ್ಲೇ ಸೆಲ್ಫ್ ಐಸೋಲೇಟ್ ಆಗಿದ್ದಾರೆ.
ಇನ್ನು ಪಾಕಿಸ್ತಾನ ಪ್ರಧಾನಿಯವರಿಗೆ ಕೊರೋನಾ ಸೋಂಕು ಅಂಟಿಕೊಂಡಿರುವುದರ ಬಗ್ಗೆ ನ್ಯಾಷನಲ್ ಹೆಲ್ತ್ ಸರ್ವಿಸ್ ನ ಇಮ್ರಾನ್ ಖಾನ್ ಸ್ಪೆಷಲ್ ಅಸಿಸ್ಟೆಂಟ್ ಫಾಸಲ್ ಸುಲ್ತಾನ್ ಖಚಿತ ಪಡಿಸಿದ್ದಾರೆ.
ಇದರೊಂದಿಗೆ ಪ್ರಧಾನಿ ಮಂತ್ರಿ ಸಚಿವಾಲಯ ಕೂಡಾ ಈ ಸುದ್ದಿಯನ್ನು ಖಚಿಪಡಿಸಿದೆ.
ಈ ನಡುವೆ ಚೀನಾ ಲಸಿಕೆ ಪಡೆದ ಇಮ್ರಾನ್ ಖಾನ್ ಅವರು ಸೋಂಕಿಗೆ ತುತ್ತಾಗಿರುವುದು ವೈರಲ್ ಆಗಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಆರೋಗ್ಯ ಸಚಿವಾಲಯ, ಇಮ್ರಾನ್ ಖಾನ್ ಪೂರ್ಣ ಪ್ರಮಾಣದ ಲಸಿಕೆ ಪಡೆದುಕೊಂಡಿಲ್ಲ. ಅವರು ಕೇವಲ ಒಂದೇ ಡೋಸ್ ಪಡೆದುಕೊಂಡಿದ್ದಾರೆ.
ಲಸಿಕೆ ಪ್ರಭಾವಶಾಲಿಯಾಗಬೇಕಾದರೆ ಎರಡು ಡೋಸ್ ಗಳನ್ನು ಪಡೆಯಬೇಕು, ಎರಡನೇ ಡೋಸ್ ಪಡೆದು ಮೂರು ವಾರಗಳ ಬಳಿಕ ರೋಗ ನಿರೋಧಕ ಶಕ್ತಿ ಬರುತ್ತದೆ ಅಂದಿದೆ.
ಇಮ್ರಾನ್ ಖಾನ್ ಕೊರೋನಾ ಸೋಂಕು ತಗುಲಿರುವ ಬಗ್ಗೆ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದು, ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
Discussion about this post