ಬೆಂಗಳೂರು : ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿರುವ ಬೆನ್ನಲ್ಲೇ ನವೆಂಬರ್ 11ರಂದು ಕರ್ನಾಟಕ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಗೆ ರಾಜ್ಯ ಸರಕಾರ ಆದೇಶ ಮಾಡಿದೆ.
ನವೆಂಬರ್ 11ರಂದು ಒನಕೆ ಓಬವ್ವ ಅವರ ಜನ್ಮ ದಿನವಾಗಿದ್ದು ಈ ದಿನವನ್ನೇ ಓಬವ್ವ ಜಯಂತಿಯನ್ನಾಗಿ ಘೋಷಿಸಲಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಣೆ ನಡೆಯಲಿದೆ.
ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ರಹನುಮಪ್ಪನ ಹೆಂಡತಿ.ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರ.
ಹೈದರಾಲಿಯ ಸೈನಿಕರು ಹಠಾತ್ತಾಗಿ ಅಕ್ರಮಣ ಮಾಡಿದ ಸಂದರ್ಭದಲ್ಲಿ ಓಬ್ಬವ್ವ ಒನಕೆಯ ಸಹಾಯದಿಂದ ಏಕಾಂಗಿಯಾಗಿ ಶತ್ರುಗಳನ್ನು ಎದುರಿಸಿದ್ದಳು.ಆದರೆ ಕೋಟೆಯನ್ನು ರಕ್ಷಿಸಿದ ಓಬ್ಬವ್ವಗೆ ಶತ್ರು ಬೆನ್ನ ಹಿಂದೆ ಬಂದಿರುವುದನ್ನು ಗಮನಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶತ್ರವಿನ ಮೋಸದ ಸಂಚಿಗೆ ಓಬ್ಬವ್ವ ಬಲಿಯಾದಳು.
Discussion about this post