ಬ್ರಿಟನ್ : ವಿಶ್ವದ ಹಲವು ರಾಷ್ಟ್ರಗಳಲ್ಲಿ ರೂಪಾಂತರಿ ವೈರಸ್ ಓಮಿಕ್ರೋನ್ ಅಟ್ಟಹಾಸದ ನಡುವೆ ಚೀನಾ ವೈರಸ್ ನ ರೂಪಾಂತರಿಯಿಂದ ಕಂಗಲಾಗಿ ಹೋಗಿದ್ದ ಬ್ರಿಟನ್ ನಲ್ಲಿ ಸೋಂಕಿನ ಅಬ್ಬರ ಕಡಿಮೆಯಾಗಲಾರಂಭಿಸಿದೆ. ಹೀಗಾಗಿ ಹಲವು ಸಡಿಲಿಕೆಗಳನ್ನು ಘೋಷಿಸಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಮುಂದಿನ ಗುರುವಾರದಿಂದ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಹಲವು ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.
ಸಾಂಕ್ರಾಮಿಕ ರೋಗ ಇದೀಗ ಸೀಮಿತ ಸೋಂಕಾಗಿ ಪರಿವರ್ತನೆಯಾಗಿದೆ. ಈ ಹಿನ್ನಲೆಯಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಬೋರಿಸ್ ಜಾನ್ಸನ್ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಬ್ರಿಟನ್ ನಲ್ಲಿ ಈ ಹಿಂದೆ ಪ್ರತೀ ನಿತ್ಯ 2 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದರು. ಈಗ ಈ ಸಂಖ್ಯೆ 90ಸಾವಿರಕ್ಕೆ ಬಂದು ನಿಂತಿದೆ. ಈ ಹಿನ್ನಲೆಯಲ್ಲಿ ವರ್ಕ್ ಫ್ರಮ್ ಹೋಮ್ ರದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಲು ಲಸಿಕೆ ಕಡ್ಡಾಯ, Mask Must ಅನ್ನುವ ನಿಯಮಗಳನ್ನು ಬ್ರಿಟನ್ ನಲ್ಲಿ ರದ್ದುಗೊಳಿಸಲಾಗಿದೆ. ಆಧರೆ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸೋದು ಕಡ್ಡಾಯ.
ಈ ನಡುವೆ ಬ್ರಿಟನ್ ಮಾದರಿ ಅನುಸರಿಸಿ ಎಂದು ಕರ್ನಾಟಕ ರಾಜ್ಯಕ್ಕೆ ತಜ್ಞರು ಸಲಹೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗಿನ ಸ್ಥಿತಿಯಲ್ಲಿ ಬ್ರಿಟನ್ ಮಾದರಿ ಭಾರತಕ್ಕೆ ಸೂಕ್ತವಲ್ಲ. ಯಾಕಂದ್ರೆ ಬ್ರಿಟನ್ ಈಗಾಗಲೇ ನಾಲ್ಕನೇ ಕೊರೋನಾ ಅಲೆಯನ್ನು ಎದುರಿಸಿದೆ. ಜೊತೆಗೆ ಅಲ್ಲಿ ಬಹುತೇಕ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಆದರೆ ಭಾರತದಲ್ಲಿ ಪರಿಸ್ಥಿತಿ ಹಾಗಿಲ್ಲ. ಮೊದಲ ಡೋಸ್ ಲಸಿಕೆ ಪೂರ್ಣಗೊಂಡಿಲ್ಲ. ಇನ್ನು ಬೂಸ್ಟರ್ ಡೋಸ್ ಮಾತು ಎಲ್ಲಿಗೆ ಬಂತು. ಮಾತ್ರವಲ್ಲದೆ ಹೀಗೆ ಮಾಸ್ಕ್ ಕಿತ್ತು ಹಾಕಿದ ಕಾರಣಕ್ಕೆ ಅಮೆರಿಕಾ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾಯ್ತು ಅನ್ನುವುದನ್ನು ಮರೆಯುವಂತಿಲ್ಲ.
Discussion about this post