ನವದೆಹಲಿ : WHO ( World Health Organization ) ಅಂದ್ರೆ ವಿಶ್ವ ಆರೋಗ್ಯ ಸಂಸ್ಥೆ. ಆದರೆ ಇದು ಇತ್ತೀಚಿನ ದಿನಗಳಲ್ಲಿ wuhan Health Organization ಅನ್ನುವಂತಾಗಿದೆ. ಇದಕ್ಕೆ ಕಾರಣ ವಿಶ್ವ ಆರೋಗ್ಯ ಸಂಸ್ಥೆಯ ನಡೆ. ಕೊರೋನಾ ಪ್ರಾರಂಭ ಕಾಲದಲ್ಲೇ ಚೀನಾದ ಕುತ್ತಿಗೆ ಹಿಡಿಯುತ್ತಿದ್ರೆ ಸಮಸ್ಯೆ ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಈಗ್ಲೂ ಸುಧಾರಿಸಿಕೊಂಡಿದೆಯೇ ಅಂದ್ರೆ ಖಂಡಿತಾ ಇಲ್ಲ. ರೂಪಾಂತರಿ ವೈರಸ್ ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಗೊಂದಲಗಳೇ ಇದಕ್ಕೆ ನಿದರ್ಶನ.
ಒಮಿಕ್ರೋನ್ ರೂಪಾಂತರಿ ವೈರಸ್ ಕಾಣಿಸಿಕೊಂಡ ಪ್ರಾರಂಭದಲ್ಲಿ ಇದೊಂದು ಸೌಮ್ಯ ಸೋಂಕು, ಆತಂಕ ಪಡಬೇಕಾಗಿಲ್ಲ ಅಂದಿದ್ದ ವಿಶ್ವ ಆರೋಗ್ಯ ಸಂಸ್ಥೆ ಇದೀಗ ಉಲ್ಟಾ ಹೊಡೆದಿದೆ. ಒಮಿಕ್ರೋನ್ ನಿಂದ ಸಾವು ಸಂಭವಿಸುತ್ತದೆ., ಆಸ್ಪತ್ರೆ ವಾಸ ಹೆಚ್ಚುತ್ತಿದೆ ಎಂದು ಯು ಟರ್ನ್ ಹೊಡೆದಿದೆ.
ಈ ಬಗ್ಗೆ ಮಾತನಾಡಿರುವ World Health Organization ಮುಖ್ಯಸ್ಥ ಟೆಡ್ರೋಸ್ ಘೇಬ್ರೆಯೇಸಸ್, ಈ ಹಿಂದಿನ ರೂಪಾಂತರಿಗಳಂತೆ ಒಮಿಕ್ರೋನ್ ಕೂಡಾ ವೇಗವಾಗಿ ವ್ಯಾಪಿಸುತ್ತಿದೆ. ಹರಡುವ ವೇಗ ನೋಡಿದರೆ 2ನೇ ಅಲೆಗೆ ಕಾರಣವಾದ ಡೆಲ್ಟಾಗೆ ಸ್ಪರ್ಧೆ ನೀಡುತ್ತಿದೆ. ಈ ಹಿಂದಿನ ರೂಪಾಂತರಿ ವೈರಸ್ ಗಳಂತೆ ಇದು ಕೂಡಾ ಜನ ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ ಇದನ್ನು ಸೌಮ್ಯ ಸೋಂಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆಸ್ಪತ್ರೆಗೆ ದಾಖಲಾಗುವ ವ್ಯಕ್ತಿಗೆ ಇದು ಮಾರಕವಾಗಬಹುದು ಅಂದಿದ್ದಾರೆ.
ಡೆಲ್ಟಾಗಿಂತ ಒಮಿಕ್ರೋನ್ ಸೌಮ್ಯವಾಗಿ ಕಾಣುತ್ತಿದೆ. ಆದರೆ ಇದು ಲಸಿಕೆ ಪಡೆದವರಲ್ಲಿ ಮಾತ್ರ. ಲಸಿಕೆ ಪಡೆಯದವರಿಗೆ ಇದು ಡೆಲ್ಟಾ ರೀತಿಯಲ್ಲಿ ಅಪಾಯಕಾರಿಯಾಗಲಿದೆ ಅಂದಿದ್ದಾರೆ.
Discussion about this post