App ಆಧಾರಿತ ಆಟೋ ರಿಕ್ಷಾಗಳು ಮುಂದಿನ ದಿನಗಳಲ್ಲಿ ದುಬಾರಿಯಾಗುವ ಲಕ್ಷಣಗಳಿದೆ ( ola uber app)
ಬೆಂಗಳೂರು : App ಆಧಾರಿತ ಆಟೋ ರಿಕ್ಷಾಗಳ ದರ ಶೀಘ್ರದಲ್ಲೇ ಮತ್ತೆ ದುಬಾರಿಯಾಗುವ ಲಕ್ಷಣಗಳಿದೆ. ಇದರ ಮುನ್ಸೂಚನೆ ಈಗಾಗಲೇ ಸಿಕ್ಕಿದ್ದು, 2 ಕಿಮೀ ಕನಿಷ್ಠ ದೂರಕ್ಕೆ 100 ರೂಪಾಯಿ ಶುಲ್ಕ ನಿಗದಿ ಮಾಡುವಂತೆ ಪಟ್ಟು ಹಿಡಿದಿದೆ.( ola uber app)
App ಆಧಾರಿತ ಆಟೋ ರಿಕ್ಷಾಗಳ ದರ ನಿಗದಿಗೆ ಸಂಬಂಧಿಸಿದಂತೆ ಶನಿವಾರ ಓಲಾ, ಉಬರ್ ಮತ್ತು Rapido ಕಂಪನಿಗಳ ಜೊತೆ ಸರ್ಕಾರ ಸಭೆ ನಡೆಸಿದೆ. ದರ ನಿಗದಿ ಕುರಿತಂತೆ ಕಂಪನಿಗಳು ವಿವಿಧ ಬೇಡಿಕೆಗಳನ್ನು ಸರ್ಕಾರ ಮುಂದಿಟ್ಟಿದೆ. ಈ ಬಗ್ಗೆ ಅಂತಿಮ ದರ ಪಟ್ಟಿಯನ್ನು ಸರ್ಕಾರ ನವೆಂಬರ್ 7 ರಂದು ಹೈಕೋರ್ಟ್ ಗೆ ಸಲ್ಲಿಸಲಿದೆ. ( ola uber app)
Read More : Anupama gowda : ಸೆಲೆಬ್ರೆಟಿ ಪಟ್ಟ ನಿಭಾಯಿಸೋದು ಅಷ್ಟೊಂದು ಕಷ್ಟವೇ… ಅನುಪಮಾ ಹೇಳಿದ ಆತ್ಮಹತ್ಯೆ ಕಥೆ….
ಈ ಹಿಂದೆ : App ಆಧಾರಿತ ಆಟೋಗಳ ಅನಧಿಕೃತ ಸೇವೆ, ಹೆಚ್ಚು ದರ ವಸೂಲಿಗಳಿಗೆ ಸಾರಿಗೆ ಇಲಾಖೆ ಮೂಗುದಾರ ಹಾಕಿತ್ತು. ಇದನ್ನು ಪ್ರಶ್ನಿಸಿದ : App ಆಧಾರಿತ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡಿದ್ದ ಹೈಕೋರ್ಟ್ : App ಆಧಾರಿತ ಸೇವೆಗೆ ಅನುಮತಿ ನೀಡುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.
Read More : Kantara tulu : ಕಾಂತಾರ ತುಳು ವರ್ಸನ್ ಬಿಡುಗಡೆಗೆ ದಿನಾಂಕ ಫಿಕ್ಸ್ ….
ಅದರಂತೆ ಸಾರಿಗೆ ಇಲಾಖೆಯಲ್ಲಿ ಸಭೆ ನಡೆದಿದ್ದು. ಇದೇ ಸಭೆಯಲ್ಲಿ ಕಂಪನಿಯೊಂದು 2 ಕಿಮೀ ಕನಿಷ್ಠ ದೂರಕ್ಕೆ 100 ರೂಪಾಯಿ ಶುಲ್ಕ ನಿಗದಿಗೆ ಒತ್ತಾಯಿಸಿದೆ. ಜೊತೆಗೆ ನಂತರದ ಪ್ರತಿ ಕಿಮೀ 15 ರೂಪಾಯಿ ಹೀಗೆ ಶೇ30ರಷ್ಟು ದರ ಹೆಚ್ಚಿಸುವಂತೆ ಹೇಳಿದೆ. ಜೊತೆಗೆ ಹೆಚ್ಚುವರಿ ಕಾಯುವಿಕೆ, ಬುಕ್ಕಿಂಗ್ ರದ್ದು ಶುಲ್ಕ ವಿಧಿಸಲು ಕಂಪನಿಗಳು ಮನವಿ ಮಾಡಿವೆ.
ಪ್ರಸ್ತುತ ಆಟೋ ರಿಕ್ಷಾಗಳಿಗೆ ಕನಿಷ್ಟ ದರ 30 ರೂಪಾಯಿ ನಿಗದಿ ಮಾಡಿದ್ದು, ನಂತರದ ಪ್ರತೀ ಕಿಮೀಗೆ 15 ರೂಪಾಯಿ ನಿಗದಿಗೊಳಿಸಲಾಗಿದೆ.
Discussion about this post