ನಿಖಿಲ್ ಎಲ್ಲಿದ್ದೀಯಪ್ಪ ಫಿಲ್ಮಗೆ ನಾನೇ ಹೀರೋ, ಪುಟ್ಟರಾಜಣ್ಣನೇ ಪ್ರೊಡ್ಯೂಸರ್ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ ಎಲ್ಲಿದ್ದೀಯಪ್ಪ ಡೈಲಾಗ್ ಅಮೆರಿಕದಲ್ಲೂ ಫುಲ್ ಫೇಮಸ್ ಆಗಿದೆಯಂತೆ.
ಈ ಟೈಟಲ್ಗೆ ಭಾರೀ ಬೇಡಿಕೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಈ ಟೈಟಲ್ ಅನ್ನು ಯಾರಿಗೂ ಕೊಡದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿಕೊಂಡಿದ್ದೇನೆ.
ಸಿನಿಮಾವನ್ನು ಸಚಿವ ಸಿ.ಎಸ್.ಪುಟ್ಟರಾಜು ಅವರೇ ಪ್ರೊಡ್ಯೂಸರ್ ಮಾಡ್ತಾರೆ ಎಂದು ತಮಾಷೆಯಾಗಿ ನಿಖಿಲ್ ಎಲ್ಲಿದ್ದೀಯಪ್ಪ ಡೈಲಾಗ್ ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟರು.
Discussion about this post