ಮಂಡ್ಯಕ್ಕೆ ಸುಮ್ಮನೆ ಟೀ, ಕಾಫಿ ಕುಡಿಯಲು ಬರುವುದಿಲ್ಲ. ನಾನು ಕಳೆದ ಹದಿನೈದು ದಿನದಿಂದಲೂ ಮಂಡ್ಯದಲ್ಲಿ ಸ್ಮಾರ್ಟ್ ಸ್ಕೂಲ್, ಉದ್ಯೋಗ ಸೃಷ್ಟಿಗೆ ಬೇಕಾದ ಕೆಲಸ ಮಾಡುತ್ತಿದ್ದೇನೆ ಎಂದು ಮಂಡ್ಯಕ್ಕೆ ಬಂದು ಟೀ ಕುಡಿದು ಹೋದ ಅಭಿಷೇಕ್ಗೆ ಪರೋಕ್ಷವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ ಟಾಂಗ್ ಕೊಟ್ಟಿದ್ದಾರೆ.
ಕೆ.ಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಯಾರೇ 20 ವರ್ಷಗಳ ಕಾಲ ರಾಜಕೀಯ ಮಾಡಿದ್ದರೂ ಈ ರೀತಿಯ ಚುನಾವಣೆ ಎದುರಿಸಲು ಆಗುವುದಿಲ್ಲ. ಆದರೆ ನಾನು ಮೊದಲ ಚುನಾವಣೆಯಲ್ಲೇ ಆ ರೀತಿಯ ಚುನಾವಣೆ ಎದುರಿಸಿದ್ದೇನೆ. ಈ ಗೆಲುವು ನನ್ನದಲ್ಲ. 45 ದಿನಗಳ ಕಾಲ ದುಡಿದ ಕಾರ್ಯಕರ್ತರ ಶ್ರಮದ ಗೆಲುವು ಎಂದಿದ್ದಾರೆ.
Discussion about this post