ಬೆಂಗಳೂರು : ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿರುವ ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಇದೀಗ ಪಾರ್ಥವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗಿದ್ದು, ಬೆಳಗ್ಗೆ 8 ಗಂಟೆಯಿಂದ 10 ಗಂಟೆ ತನಕ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸರ್ಕಾರವೇ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಈ ಮೂಲಕ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಟನಿಗೆ ಗೌರವ ಸಲ್ಲಿಸಿದೆ.
10 ಗಂಟೆಯ ಬಳಿಕ ವಿಜಯ್ ಪಾರ್ಥಿವ ಶರೀರ ಅವರ ಹುಟ್ಟೂರಿಗೆ ತೆರಳಲಿದೆ. ಪಂಚನಹಳ್ಳಿಯಲ್ಲಿ ಅಂತಿಮ ವಿಧಿ ವಿಧಾನಗಳ ಬಳಿಕ ಅಂತ್ಯ ಸಂಸ್ಕಾರ ನೆರವೇರಲಿದೆ.
ಇನ್ನು ಚಿಕ್ಕವಯಸ್ಸಿನಲ್ಲಿ ಉಸಿರು ನಿಲ್ಲಿಸಿರುವ ಸಂಚಾರಿ ವಿಜಯ್, ಸಾವಿನಲ್ಲೂ ಸಾರ್ಥಕತೆಯನ್ನು ಮರೆದಿದ್ದಾರೆ. ಎನಿಲ್ಲ ಅಂದರೂ ಸ್ವರ್ಗಕ್ಕೆ ಪಯಣಿಸುವ ಮುನ್ನ 6 ಜನರಿಗೆ ಹೊಸ ಬದುಕು ನೀಡಿದ ಹಿರಿಮೆ ವಿಜಯ್ ಅವರದ್ದು.
Discussion about this post