ಐಡಾ ಚಂಡಮಾರುತ ಪರಿಣಾಮ ಅಮೆರಿಕಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅದರಲ್ಲೂ ಮಹಾಮಳೆಗೆ ನ್ಯೂಯಾರ್ಕ್ ನಗರ ಬಹುತೇರ ಮುಳುಗಿದೆ. ಇಡೀ ಸಿಟಿಯಲ್ಲಿ ಪ್ರವಾಹ ಉಕ್ಕಿ ಹರಿದಿದ್ದು ಸಬ್ ವೇ ರೈಲು ನಿಲ್ದಾಣಗಳು ನೀರಿನಿಂದ ಆವೃತವಾಗಿದೆ. ಹೀಗಾಗಿ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದ್ದು , ನ್ಯೂಜೆರ್ಸಿಯಲ್ಲಿ ಬಾರಿ ಬಿರುಗಾಳಿ ಬೀಸಿದ್ದು ಅನೇಕ ಮನೆಗಳು ದ್ವಂಸವಾಗಿದೆ. ಇನ್ನು ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಅನೇಕ ವಾಹನಗಳು ಮುಳುಗಡೆಯಾಗಿದೆ.
ಮಳೆಯಬ್ಬರಕ್ಕೆ ನ್ಯೂಯಾರ್ಕ್ ನಗರದಲ್ಲಿ ಏಳು ಹಾಗೂ ನ್ಯೂಜೆರ್ಸಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಕನ್ನಡಿಗರು ನೀಡಿರುವ ಮಾಹಿತಿ ಪ್ರಕಾರ ಸಾಮಾನ್ಯವಾಗಿ ಒಂದು ತಿಂಗಳ ಅವಧಿಯಲ್ಲಿ ಸುರಿಯುವ ಮಳೆ ಬುಧವಾರ ಒಂದೇ ದಿನ ಸುರಿದಿದೆಯಂತೆ.
Discussion about this post