ಕೊರೋನಾ ಕಾರಣದಿಂದ ಜನರ ಆದಾಯಕ್ಕೆ ಕುತ್ತು ಬಂದಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಭರ್ಜರಿಯಾಗಿ ಕಾಸು ಮಾಡುತ್ತಿದ್ದಾರೆ. ಈ ನಡುವೆ ಅಚ್ಛೇ ದಿನಕ್ಕಾಗಿ ಕಾಯುತ್ತಿದ್ದವರಿಗೆ ನಿರಾಶೆಯಾಗಿದೆ ( new gst rates )
ಬೆಂಗಳೂರು : ಕೇಂದ್ರ ಸರ್ಕಾರ ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ, ಬ್ರಾಂಡ್ ನಮೂದಿಸಿ ಮಾರಾಟ ಮಾಡುವ ವಸ್ತುಗಳ ಮೇಲೆ ಶೇ5ರಷ್ಟು GST ಹೇರಿದೆ. ( new gst rates )ಇದರ ಪರಿಣಾಮ ಹಾಲಿನ ಉತ್ತನ್ನಗಳಾದ ಮೊಸರು, ಮಜ್ಜಿಗೆ ಮತ್ತು ಲಸ್ಸಿ ದರ ಏರಿಕೆಯಾಗಿದೆ. ಇಂದಿನಿಂದಲೇ ದರ ಏರಿಕೆಯಾಗಿದ್ದು ನಂದಿನಿ ಹಾಲಿನ ದರ 2 ರಿಂದ 3 ರೂಪಾಯಿ ಹೆಚ್ಚಿಗೆಯಾಗಲಿದೆ
ಮೊಸರು ಮತ್ತು ಮಜ್ಜಿಗೆ ಪ್ಯಾಕೆಟ್ ಗಳ ಮೇಲೆ ಈಗಾಗಲೇ ಹಳೆಯ ದರ ನಮೂದಾಗಿರುವ ಕಾರಣ ಸಾರ್ವಜನಿಕರು ಸಹಕರಿಸುವಂತೆ ಕೆಎಂಎಫ್ ಮನವಿ ಮಾಡಿದೆ. ಇನ್ನು ದರ ಏರಿಕೆ ಬಿಸಿ ಹೇಗಿದೆ ಅನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ : bbmp high court : ಜ್ಯೋತಿಷ್ಯ ಕೇಂದ್ರ ಮುಚ್ಚುವಂತೆ ಆದೇಶಿಸಿದ್ದ ಬಿಬಿಎಂಪಿಗೆ ಮುಖಭಂಗ
200 ಗ್ರಾಂ ಪ್ಯಾಕೆಟ್ ಮೊಸರಿಗೆ 10 ಇತ್ತು, ಈಗ 12 ರೂಪಾಯಿಗೆ ಏರಿಸಲಾಗಿದೆ. ಅರ್ಧ ಲೀಟರ್ ಮೊಸರು ದರ 22 ರೂಪಾಯಿ ಇತ್ತು ಇನ್ಮುಂದೆ 24 ರೂಪಾಯಿ ಕೊಡಬೇಕು. ಒಂದು ಲೀಟರ್ ಮೊಸರು 43 ರೂಪಾಯಿಯಿಂದ 46 ರೂಪಾಯಿಗೆ ಜಿಗಿದಿದೆ.
ಮಜ್ಜಿಗೆ 20 Mlಗೆ 7 ರೂಪಾಯಿ ಇತ್ತು, ಈಗ 8 ರೂಪಾಯಿಗೆ ಏರಿಕೆಯಾಗಿದೆ. 200 Ml ಟೆಟ್ರಾ ಪ್ಯಾಕ್ ಮಜ್ಜಿಗೆ 10 ರೂಪಾಯಿ ಇದ್ದದ್ದು 11 ರೂಪಾಯಿಯಾಗಲಿದೆ 200 Ml ಮಜ್ಜಿಗೆ ಪೆಟ್ ಬಾಟಲ್ 12 ರೂಪಾಯಿಂದ 13 ರೂಪಾಯಿಯಾಗಲಿದೆ.
ಇನ್ನುಳಿದಂತೆ ಅಕ್ಕಿ,ಬೇಳೆ, ಕಾಳು ಕೂಡಾ ದುಬಾರಿಯಾಗಲಿದೆ. ಅಷ್ಟೇ ಯಾಕೆ ಆಸ್ಪತ್ರೆಯೂ ದುಬಾರಿಯಾಗಲಿದೆ. ಹೊಸ ಜಿಎಸ್‌ಟಿ ನೂರಕ್ಕೆ ನೂರರಷ್ಟು ಜನರ ಜೇಬು ಸುಡಲಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗ್ತಿರೋದು ಜನಜೀವನವನ್ನ ಬುಡಮೇಲು ಮಾಡೋದು ಖಚಿತ.
ಹಾಗಾದ್ರೆ ಯಾವುದೆಲ್ಲಾ ಇಂದಿನಿಂದ ದುಬಾರಿ ಇಲ್ಲಿದೆ ಪಟ್ಟಿ
ಪ್ಯಾಕ್ ಮಾಡಿರುವ ಬ್ರ್ಯಾಂಡ್ ಆಹಾರ ಪದಾರ್ಥಗಳು – 5% GST
ಮೊಸರು, ಲಸ್ಸಿ, ಬೆಣ್ಣೆ, ಹಪ್ಪಳ, ಜೇನುತುಪ್ಪ , ಉಪ್ಪಿನಕಾಯಿ – 5% GST
ಪನ್ನೀರ್, ಒಣಕಾಳು, ತರಕಾರಿ, ಮಾಂಸ, ಮೀನು – 5% GST
ಭೂಪಟ ಮತ್ತು ಅಟ್ಲಾಸ್ – 12% GST
ಚೆಕ್ ಬುಕ್, ಆರ್‌ಬಿಐ, ಐಆರ್‌ಡಿಐ, ಸೆಬಿ ಸೇವೆಗಳು – 18% GST
ಸೋಲಾರ್ ವಾಟರ್ ಹೀಟರ್, ಲೆದರ್ ಸಾಮಗ್ರಿ – 5% to 12% GST
ಚಾಕು, ಬ್ಲೇಡ್, ಚಮಚ, ಫೋರ್ಕ್ – 12% to 18% GST
ಪೆಟ್ರೋಲಿಯಂ, ಕಲ್ಲಿದ್ದಲು, ವೈಜ್ಞಾನಿಕ ಯಂತ್ರಗಳು – 12% to 18% GST
ಇಂಕ್, ಮೆಂಡರ್, ಬ್ಲೇಡ್, ಸೌಟು, ಜಾಲರಿ ಸೌಟು, – 12% to 18% GST
ವಿದ್ಯುತ್ ಚಾಲಿತ ವಾಟರ್ ಪಂಪ್, ಬೈಸಿಕಲ್ ಪಂಪ್ – 12% to 18% GST
ಟರ್ಬೈನ್ ಪಂಪ್, ಸಬ್ಮರ್ಸಿಬಲ್ ಪಂಪ್ – 12% to 18% GST
ಡೈರಿ ಉದ್ಯಮದ ಯಂತ್ರಗಳು, ರುಬ್ಬುವ ಯಂತ್ರ – 12% to 18% GST
ಧಾನ್ಯ ವಿಂಗಡಿಸುವ ಗ್ರೇಡಿಂಗ್ ಯಂತ್ರ – 12% to 18% GST
₹1000 ಗಿಂತ ಕಡಿಮೆ ಇರೋ ಹೋಟೆಲ್ ರೂಂ – 0 to 12% GST
₹5000 ಹೆಚ್ಚು ಶುಲ್ಕ ಇರೋ ಆಸ್ಪತ್ರೆಯ ಸ್ಪೆಷಲ್ ವಾರ್ಡ್ – 0 to 5% GST
Discussion about this post