ಈ ಹಿಂದೆ ಕೆಲ ಘಟಾನುಘಟಿ ನಾಯಕರು ಸಿಡಿ ವಿಚಾರದಲ್ಲಿ ತಡೆಯಾಜ್ಞೆ ತಂದಿರುವುದಕ್ಕೂ ನವ್ಯಶ್ರೀ (Navyashree Intimate video) ಆಡುತ್ತಿರುವ ಮಾತಿಗೂ ಲಿಂಕ್ ಮಾಡಿ ನೋಡಿ
ಬೆಂಗಳೂರು : ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಬೇಸರ ಮೂಡಲಾರಂಭಿಸಿದೆ. ನರೇಂದ್ರ ಮೋದಿಗಾಗಿ ನಾವೆಲ್ಲಾ ಇವರನ್ನು ಸಹಿಸಿಕೊಂಡಿದ್ದೇವೆ ಅನ್ನುವುದು ತಳಮಟ್ಟದ ಕಾರ್ಯಕರ್ತರ ಮಾತು. ಅಷ್ಟು ಮಾತ್ರವಲ್ಲದೆ 2023 ಚುನಾವಣೆಯಲ್ಲಿ ಕಾರ್ಯಕರ್ತರು ಮನಸ್ಸಿಟ್ಟು ದುಡಿಯುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿಯೇ ಬೊಮ್ಮಾಯಿ ಸರ್ಕಾರ ಆಡಳಿತ ವಿರೋಧಿ ಅಲೆಗೆ ಸಿಲುಕಿದೆ.
ಈ ನಡುವೆ ತೋಟಗಾರಿಕಾ ಇಲಾಖೆಯ ಅಧಿಕಾರಿಯೊಂದಿಗಿನ ಸಂಬಂಧ ಕಾರಣಕ್ಕೆ ಸುದ್ದಿಯಾಗಿರುವ ನವ್ಯಶ್ರೀ ರಾಮಚಂದ್ರ ರಾವ್ ( Navyashree Intimate video) ಅವರ ಆಶ್ಲೀಲ ವಿಡಿಯೋ ವೈರಲ್ ಆಗಿತ್ತು. ಇದೀಗ ಇಡೀ ವಿಡಿಯೋ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ನವ್ಯಶ್ರೀ ಕೊಟ್ಟಿರುವ ಹೇಳಿಕೆಗಳು ರಾಜಕೀಯದಲ್ಲಿ ತಲ್ಲಣ ಮೂಡಿಸಿದ್ದು, ಬೊಮ್ಮಾಯಿ ಸರ್ಕಾರಕ್ಕೆ ಕುತ್ತು ತರಲಿದೆ ಅನ್ನಲಾಗಿದೆ.
ಇದನ್ನೂ ಓದಿ : Parrot : ಜ್ಯೋತಿಷಿಯ ಸಲಹೆ ಬೆನ್ನಲ್ಲೇ ನಾಪತ್ತೆಯಾಗಿದ್ದ ಗಿಣಿ ಪತ್ತೆ
ನವ್ಯಶ್ರೀ ((Navyashree Intimate video)) ಪ್ರಸ್ತಾಪಿಸಿರುವ ಚನ್ನಪಟ್ಟಣ ಮತ್ತು ಬೆಳಗಾವಿಯ ಮಹಾನಾಯಕರ ಹೆಸರು ಹಲವು ತಿಂಗಳ ಹಿಂದೆ ಸುದ್ದಿಯಾಗಿತ್ತು. ಹೀಗಾಗಿ ಈ ಅವಧಿಯಲ್ಲಿ ಸರ್ಕಾರ ಅಧಿಕಾರ ಪೂರ್ಣಗೊಳಿಸಿದರೂ, ಚುನಾವಣೆ ಹೊತ್ತಿನಲ್ಲಿ ಹಲವು ಸಿಡಿಗಳು ಸಿಡಿದರೂ ಅಚ್ಚರಿ ಇಲ್ಲ ಅನ್ನಲಾಗಿದೆ. ವಿಧಾನಸೌಧದ ಮೂರನೇ ಮಹಡಿಯ ಮೇಲೆ ಅನೇಕ ಮಹಾನಾಯಕರು ಕಣ್ಣಿಟ್ಟಿರುವ ಕಾರಣ ಈ ಸಿಡಿ ಸದ್ದು ಮಾಡುವುದನ್ನು ನಿರೀಕ್ಷಿಸಬಹುದಾಗಿದೆ.
ಮಾತ್ರವಲ್ಲದೆ ಈಗಾಗಲೇ ಅನೇಕ ನಾಯಕರು ಅವರ ಸಿಡಿ ನನ್ನ ಬಳಿ ಇದೆ, ಇವರ ಸಿಡಿ ನನ್ನ ಬಳಿ ಇದೆ, 19 ಮಂದಿಯೂ ಸಿಡಿಯೂ ಇದೆಯಂತೆ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದರು. ಯಾವತ್ತೊ ಕೊಟ್ಟ ಹೇಳಿಕೆಗಳನ್ನು ನವ್ಯಾಶ್ರೀ ಕೊಟ್ಟಿರುವ ಹೇಳಿಕೆಗಳನ್ನು ಜೋಡಿಸಿದರೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಸಿಡಿ ರಾಜಕಾರಣ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳಿದೆ.
ಇದನ್ನೂ ಓದಿ : Koppal : ಕೊಪ್ಪಳದ ಹಂದಿ ಕಳ್ಳರ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್
Discussion about this post