ರಾಜಕುಮಾರ ಟಾಕಳೆ ( Navya shree takale )ಇದೀಗ ತಲೆಮರೆಸಿಕೊಂಡಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ
ಬೆಳಗಾವಿ : ಪ್ರೀತಿ ಪ್ರೇಮ ದೋಖಾ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ತೋಟಗಾರಿಕಾ ಇಲಾಖೆ ಅಧಿಕಾರಿ ರಾಜ್ ಕುಮಾರ್ ಟಾಕಳೆ ವಿರುದ್ಧ ಕಾಂಗ್ರೆಸ್ ನಾಯಕಿ ನವ್ಯಾಶ್ರೀ (Navya shree takale) ಗಂಭೀರ ಆರೋಪ ಮಾಡಿದ್ದಾರೆ.ಟಾಕಳೆಯ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಮಾಧ್ಯಮಗೋಷ್ಟಿ ನಡೆಸಿರುವ ಅವರು ಪೊಲೀಸರು ತಕ್ಷಣ ಟಾಕಳೆಯ ಮೊಬೈಲ್ ಅನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜಕುಮಾರ್ ಟಾಕಳೆಯ ಮೊಬೈಲ್ ನಲ್ಲಿ ಇನ್ನಷ್ಟು ಮಹಿಳೆಯರ ಅಶ್ಲೀಲ ವಿಡಿಯೋಗಳಿದೆ. ಆತನಿಗೆ ಕಚೇರಿಯ ಮಹಿಳೆಯರ ಜೊತೆಗೆ ಸಂಬಂಧಗಳಿತ್ತು. ಹೀಗಾಗಿ ಮತ್ತಷ್ಟು ಮಹಿಳೆಯರ ಅಶ್ಲೀಲ ವಿಡಿಯೋ ಬಹಿರಂಗವಾಗುವ ಸಾಧ್ಯತೆಗಳಿದೆ. ಹೀಗಾಗಿ ತಕ್ಷಣ ಪೊಲೀಸರು ಆತನ ಮೊಬೈಲ್ ಅನ್ನು ಸೀಜ್ ಮಾಡಬೇಕು ಎಂದು (Navya shree takale) ಆಗ್ರಹಿಸಿದ್ದಾರೆ.
ಇದನ್ನೂ ಓದಿ : Police Ramp Walk : ಕ್ಯಾಟ್ ವಾಕ್ ಮಾಡಿದ 5 ಪೊಲೀಸ್ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ
ಇದೇ ವೇಳೆ ಟಾಕಳೆ ಬಂಧನಕ್ಕೆ ಆಗ್ರಹಿಸಿರುವ ನವ್ಯಾಶ್ರೀ, ಪೊಲೀಸರು ತಕ್ಷಣ ಬಂಧಿಸಬೇಕು, ಈ ಸಂಬಂಧ ಈಗಾಗಲೇ ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಒಂದು ವೇಳೆ ಮಂಗಳವಾರದ ಒಳಗೆ ಬಂಧನವಾಗದಿದ್ರೆ ಆಯುಕ್ತರ ಕಚೇರಿಯೇ ಮುಂದೆ ಮೌನ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.
ಈ ನಡುವೆ ಟಾಕಳೆ ವಿರುದ್ಧ ಹರಿಹಾಯ್ದಿರುವ ನವ್ಯಶ್ರೀ ಗಂಡ ಅಂದ ತಕ್ಷಣ ಹೆಂಡ್ತಿಯ ವಿಡಿಯೋ ಬಿಡೋದು ಸರಿಯೇ. ಜೊತೆಗೆ ವಿಡಿಯೋ ಮಾಡುವ ವಿಕೃತ ಚಟವೂ ಆತನಿಗಿದೆ. ಹೀಗಾಗಿಯೇ ನಾನು ಆತನ ವಿರುದ್ಧ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇನೆ.ಜೊತೆಗೆ ರಾಜಕುಮಾರನ ರಾಜಕುಮಾರಿ ನಾನೇ ಅನ್ನೋದನ್ನ ಟ್ರಯಲ್ ನಲ್ಲಿ ಸಾಬೀತು ಮಾಡ್ತೀನಿ ಎಂದು ನವ್ಯಾಶ್ರೀ ಹೇಳಿದ್ದಾರೆ.
Discussion about this post