ಬೆಂಗಳೂರು : ಮೈಸೂರಿನ ಹೋಟೆಲ್ ಒಂದರ ಒಂದೇ ಕೊಠಡಿಯಲ್ಲಿ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ( Pavithra lokesh ) ನರೇಶ್ ಪತ್ನಿ ರಮ್ಯಾ ರಘುಪತಿ ಕೈಗೆ ರೆಡ್ ಹ್ಯಾಂಡ್ ಹಾಕಿ ಸಿಕ್ಕಿ ಬಿದ್ದಿದ್ದಾರೆ. ಈಗಾಗಲೇ ನರೇಶ್ ಮತ್ತು ಪವಿತ್ರಾ ಸಂಬಂಧ ಏನು ಅನ್ನುವುದನ್ನು ಅವರಿಬ್ಬರು ಬೇರೆ ಬೇರೆ ಟಿವಿ ಚಾನೆಲ್ ಗಳಲ್ಲಿ ಹೇಳಿಕೊಂಡಿದ್ದಾರೆ.
ಈ ನಡುವೆ ಹೋಟೇಲ್ ನಿಂದ ಪವಿತ್ರಾ ಲೋಕೇಶ್ ಜೊತೆ ಪರಾರಿಯಾಗುವ ಸಂದರ್ಭದಲ್ಲಿ ನರೇಶ್ ಆಡಿದ ಮಾತುಗಳು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನು ಮೂಲಕ, ಕುಟುಂಬ ವ್ಯವಸ್ಥೆಯ ಮೂಲಕ ಪರಿಹರಿಸಬಹುದಿತ್ತು. ಆದರೆ ನರೇಶ್ ಅವರ ಇತ್ತೀಚಿನ ವರ್ತನೆ ಗಮನಿಸಿದರೆ ಕಾಸಿನ ಮೂಲಕ ಎಲ್ಲವನ್ನೂ ನಿಭಾಯಿಸಬಲ್ಲೆ ಅನ್ನುವಂತಿತ್ತು. ಕರ್ನಾಟಕ ವಿವಿಧ ಸುದ್ದಿ ವಾಹಿನಿಗಳಲ್ಲಿ ನರೇಶ್ ಕೊಟ್ಟ ಸಂದರ್ಶನಗಳೇ ಈ ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಪವಿತ್ರಾ ಲೋಕೇಶ್ ಮುಂದೆಯೇ ಪತ್ನಿ ಕೈಯ ಚಪ್ಪಲಿ ಸೇವೆ ತಪ್ಪಿಸಿಕೊಂಡ ನರೇಶ್
ಇನ್ನು ಪೂರ್ತಿ ಘಟನೆ ಬಗ್ಗೆ ಪವರ್ ಟಿವಿಯಲ್ಲಿ ಸುದೀರ್ಘ ಚರ್ಚೆ ಪ್ರಸಾರವಾಗಿದ್ದು, ಇದೇ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ, ತಾವು ಒಬ್ಬ ಅಣ್ಣನಾಗಿ ರಮ್ಯ ರಘುಪತಿ ಜೊತೆಗೆ ನಿಂತಿದ್ದೇನೆ. ಆದರೆ ನರೇಶ್ ಕೆಲವು ಕೆಟ್ಟ ಮಾತುಗಳನ್ನು ಆಡಿದ್ದಾರೆ. ಸಂಬಂಧ ಕಲ್ಪಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ರಮ್ಯ ಅವರ ಶೀಲದ ಬಗ್ಗೆ ಮಾತನಾಡಿದ ನೀಚನ ಬಗ್ಗೆ ಹೈದರಬಾದ್ ನಲ್ಲಿ ಜಾತಕ ಬಿಚ್ಚಿಡುವುದಾಗಿ ಘೋಷಿಸಿದ್ದಾರೆ. ತೆಲುಗಿನ ಜನ ಈ ನಟನ ಅಸಲಿ ಮುಖವನ್ನು ನೋಡಲಿ. ಮಾಡಿದ ಅನ್ಯಾಯ ಅವರಿಗೆ ಅರ್ಥವಾಗಲಿ ಅಂದಿದ್ದಾರೆ.
ಇದನ್ನೂ ಓದಿ : ಹೋಟೆಲ್ ನ ಒಂದೇ ಕೊಠಡಿಯಲ್ಲಿ ಸಿಕ್ಕಿ ಬಿದ್ದ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್
ಸುಚೇಂದ್ರ ಪ್ರಸಾದ್ ಅವರಿಗೂ ಮದುವೆಯಾಗಿತ್ತು… ಆ ಸಂಸಾರ ಮುರಿದು ಬಿದ್ದಿದ್ದು ಯಾಕೆ….
ಮೈಸೂರು : ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ವಿಚಾರ ಇದೀಗ ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಕನ್ನಡ ಮಹಿಳೆಯೊಬ್ಬರಿಗೆ ನರೇಶ್ ಮತ್ತು ಪವಿತ್ರ ಕಡೆಯಿಂದ ಅನ್ಯಾಯವಾಗುತ್ತಿದೆ ಅನ್ನುವ ದೂರುಗಳು ಕೇಳಿ ಬಂದಿದೆ. ಈ ನಡುವೆ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ ನರೇಶ್ ಮತ್ತು ಪವಿತ್ರ ನಮ್ಮ ನಡುವೆ ಏನಿಲ್ಲ ನಾವಿಬ್ಬರು ಗೆಳೆಯರು ಅಂದಿದ್ದರು. ಆದರೆ ಅವರಿಬ್ಬರ ನಡೆ ನುಡಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಕಳೆದ ಹಲವು ವರ್ಷಗಳಿಂದ ಆಂಧ್ರದಲ್ಲಿ ಅವರು ಓಡಾಡುತ್ತಿರುವುದನ್ನು ನೋಡಿದಾಗಲೇ ಅನುಮಾನ ಬಂದಿತ್ತು.
Actor Naresh wife Ramya Raghupathi tried to attack him and actor Pavithra Lokesh with her slipper at a Mysore hotel
Discussion about this post