ಮೈಸೂರು : ಅಬ್ಬರಿಸುತ್ತಿರುವ ಕೊರೋನಾ ಸೋಂಕಿನ ಎರಡನೆ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಈಗಾಗಲೇ ಹಲವು ಕ್ರಮಗಳನ್ನು ಘೋಷಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಂದು ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದಾರೆ.ಇನ್ನು ಮುಂದೆ ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಥಿಯೇಟರ್ ಗೆ ಎಂಟ್ರಿ ಅನ್ನುವ ಆದೇಶ ಇಂದು ಹೊರ ಬಿದ್ದಿದೆ. ಈ ಹಿನ್ನಲೆಯಲ್ಲಿ ಫಿಲ್ಮಂ ನೋಡಬೇಕು ಅಂದ್ರೆ ಟಿಕೆಟ್ ಮಾತ್ರ ಸಾಲದು, ನೆಗೆಟಿವ್ ರಿಪೋರ್ಟ್ ಕೂಡಾ ಇರಬೇಕು. ಅದು ಕೂಡಾ 72 ಗಂಟೆಗಳ ಒಳಗಿನದ್ದಾಗಿರಬೇಕು.
ಇನ್ನು ದೇವಸ್ಥಾನ, ಪ್ರವಾಸಿ ತಾಣಗಳು, ರೆಸಾರ್ಟ್, ಹೊಟೇಲ್ ಗಳ ಪ್ರವೇಶಕ್ಕೂ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಸರ್ಟಿಫಿಕೆಟ್ ತಾರದವರನ್ನು ಯಾವುದೇ ಕಾರಣಕ್ಕೆ ಈ ಸ್ಥಳಗಳಿಗೆ ಸೇರಿಸಿಕೊಳ್ಳದಂತೆ ಸೂಚಿಸಲಾಗಿದೆ.
ಈ ನಿಯಮ ಎಪ್ರಿಲ್ 10 ರಿಂದ 20ರವರೆಗೆ ಜಾರಿಯಲ್ಲಿರಲ್ಲಿದ್ದು, ಈ ಹತ್ತು ದಿನಗಳ ಕಾಲ ಕಠಿಣ ಕ್ರಮಗಳನ್ನು ಪಾಲಿಸಿದ್ರೆ ಕೊರೋನಾ ಒಂದು ಹಂತಕ್ಕೆ ಹತೋಟಿಗೆ ಬರಬಹುದು ಅನ್ನುವ ನಿರೀಕ್ಷೆ ಜಿಲ್ಲಾಡಳಿತದ್ದು.
ಇದನ್ನೂ ಓದಿ : ಕೊರೋನಾ ಸೋಲಿಸುವ ಸಲುವಾಗಿ ಊಟದ ವಿರಾಮಕ್ಕೂ ಕತ್ತರಿ…!
ಈ ನಡುವೆ ಮೈಸೂರು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಕೊರೋನಾ ತಡೆ ನಿಟ್ಟಿನಲ್ಲಿ ಆದೇಶವೊಂದನ್ನು ಹೊರಡಿಸಿದ್ದು, ಮದುವೆ ಸೇರಿದಂತೆ ಶುಭ ಕಾರ್ಯಗಳಿಗೆ ಅನುಮತಿ ಕಡ್ಡಾಯವಾಗಿದೆ. ನಿಮ್ಮ ವ್ಯಾಪ್ತಿಯ ಎಸಿಪಿ ಕಡೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಈ ಆದೇಶದಲ್ಲಿ ಸೂಚಿಸಲಾಗಿದೆ.
ಜೊತೆಗೆ ಮದುವೆ ಮನೆಗಳಲ್ಲಿ ಟೆಸ್ಟ್ ಕಡ್ಡಾಯವಲ್ಲ ಅನ್ನುವ ನೆಮ್ಮದಿಯ ಸಾಲೊಂದು ಈ ಆದೇಶದಲ್ಲಿದೆ. ಇದೊರಂದಿಗೆ ಮೈಸೂರಿನಲ್ಲಿ ಜಾತ್ರೆ ಊರ ಹಬ್ಬಗಳನ್ನು ರದ್ದುಗೊಳಿಸಿ ಪೊಲೀಸ್ ಆಯುಕ್ತ ಆದೇಶ ಹೊರಡಿಸಿದ್ದಾರೆ.
Discussion about this post