ಸಮುದ್ರ ಸೇತುವೆ ದಾಟಲು ಮಹಾರಾಷ್ಟ್ರ ಸರ್ಕಾರ ಇದೀಗ ಟೋಲ್ ದರ ನಿಗದಿ ಮಾಡಿದೆ
ದೇಶದ ಅತಿ ಉದ್ದದ ಸಮುದ್ರ ಸೇತುವೆ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (Mumbai Trans-Harbour Link) ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇದೇ ಜನವರಿ 12ರಂದು ಉದ್ಘಾಟಿಸಲಿದ್ದಾರೆ.
ಈ ನಡುವೆ ಸೇತುವೆಯನ್ನು ಬಳಸುವವರಿಗೆ ಶುಲ್ಕ ವಿಧಿಸುವ ಕುರಿತಂತೆ ಮಹಾರಾಷ್ಟ್ರ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಕಾರುಗಳಲ್ಲಿ ಸಂಚರಿಸುವವರಿಗೆ ಒಂದು ಕಡೆ ಪ್ರಯಾಣಕ್ಕೆ 250 ರೂಪಾಯಿ ನಿಗದಿ ಮಾಡಲಾಗಿದೆ. ಈ ಸಂಬಂಧ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಜ್ಯೋತಿಷಿ ಹೇಳಿದ ಮಾತಿನಿಂದ ಖಿನ್ನತೆಗೆ ಜಾರಿದ್ರ ಪ್ರತಾಪ್
ಕಾರಿಗೆ ಏಕಮುಖ ಟೋಲ್ 250 ರೂಪಾಯಿಗಳಾಗಿದ್ದು, ವಾಪಾಸ್ ಪ್ರಯಾಣ ಹಾಗೂ ದೈನಂದಿನ ನಿರಂತರ ಪ್ರಯಾಣಕ್ಕೆ ಬೇರೆ ಬೇರೆ ಶುಲ್ಕಗಳನ್ನು ನಿಗದಿಗೊಳಿಸಲಾಗಿದೆ. ಈ ದರ ದುಬಾರಿಯಾಯ್ತು ಅನ್ನುವ ಆಕ್ರೋಶದ ನಡುವೆ, ನಿಯಮಗಳ ಪ್ರಕಾರ ಒಟ್ಟು ಶುಲ್ಕದ ಅರ್ಧದಷ್ಟು ಮೊತ್ತವನ್ನು ಮಾತ್ರ ವಿಧಿಸಲಾಗುತ್ತಿದ್ದು, ಪ್ರಯಾಣದ ಸಮಯ ಎರಡು ಗಂಟೆಗಳಿಂದ 20 ನಿಮಿಷಕ್ಕೆ ಇಳಿಯುತ್ತದೆ. ಮಾತ್ರವಲ್ಲದೆ ಪ್ರತೀ ಪ್ರಯಾಣಿಕ 500 ರೂಪಾಯಿ ಮೊತ್ತದ ಇಂಧನ ಉಳಿಸಲಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೇತುವೆಯ ಹೈಲೈಟ್ಸ್
- ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ 21.8 ಕಿಲೋ ಮೀಟರ್ ಉದ್ದದ ಈ ಸೇತುವೆ
- ಪ್ರಯಾಣದ ಅವಧಿ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಇಳಿಕೆ
- ಸರಿಸುಮಾರು 22 ಕಿಲೋ ಮೀಟರ್ ಉದ್ದದ 6 ಲೇನ್ (3+3-ಲೇನ್, 2 ತುರ್ತು ಲೇನ್) ಸೇತುವೆ
- ಈ ಸೇತುವೆಯನ್ನು ಮುಂಬೈ ನಗರದ ಶಿವಡಿ ಮತ್ತು ಮುಖ್ಯ ಭೂಭಾಗದ ನ್ಹಾವಾವನ್ನು ಸಂಪರ್ಕಿಸಲಿದೆ.
- ಎರಡು ನಗರಗಳ ಮಧ್ಯೆ ಸಂಚಾರ ವ್ಯವಸ್ಥೆ ಮಾಡಲು ಈ ಯೋಜನೆಯನ್ನು 1962ರಲ್ಲಿ ರೂಪಿಸಲಾಗಿತ್ತು.
- 2008ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಜಾರಿಗೆ ಸಂಬಂಧ ಟೆಂಡರ್ ಆಹ್ವಾನ
- ಯೋಜನೆಯಲ್ಲಿ ರಾಜಕೀಯ ಪ್ರಾರಂಭ ಹಾಗೂ ಯೋಜನೆಗೆ ಟೀಕೆ ಬಂದ ಹಿನ್ನೆಲೆಯಲ್ಲಿ ಸ್ಥಗಿತ
- 2016ರ ಡಿಸೆಂಬರ್ 24ರಂದು ಪ್ರಧಾನಿ ಮೋದಿ ಅವರಿಂದ ಈ ಯೋಜನೆಗೆ ಶಂಕುಸ್ಥಾಪನೆ
- 2018ರ ಏಪ್ರಿಲ್ 24 ರಂದು ಕಾಮಗಾರಿ ಆರಂಭ
- ಸೆಪ್ಟೆಂಬರ್ 22, 2022ಕ್ಕೆ ಯೋಜನೆ ಮುಕ್ತಾಯಕ್ಕೆ ಗಡುವು, ಕೋವಿಡ್ ಕಾರಣ ಕಾರ್ಮಿಕರ ಕೊರತೆ ಕಾಮಗಾರಿ ವಿಳಂಭ
- ಆರಂಭದಲ್ಲಿ ಈ ಯೋಜನೆ ನಿರ್ಮಾಣಕ್ಕೆ 14,712.70 ಕೋಟಿ ರೂಪಾಯಿ ಅಂದಾಜು ವೆಚ್ಚ
ಇದೀಗ ಈ ವೆಚ್ಚ 16,904.43 ಕೋಟಿ ರೂಪಾಯಿಗೆ ಏರಿಕೆ ಈ ಯೋಜನೆಯನ್ನು ಮೂರು ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿತ್ತು. ಮೊದಲ ಪ್ಯಾಕೇಜ್ ಅನ್ನು ಸೆವ್ರಿಯಿಂದ ಥಾಣೆ ಕ್ರೀಕ್ಗೆ 10.38 ಕಿಮೀ. ಇದನ್ನು L&T ಮತ್ತು IHI ಕಾರ್ಪೊರೇಷನ್ ಕಂಪನಿಗಳು ಅಭಿವೃದ್ಧಿಪಡಿಸುತ್ತಿದೆ. ಎರಡನೇ ಪ್ಯಾಕೇಜ್ ಥಾಣೆಯ ಕ್ರೀಕ್ನಿಂದ ಶಿವಾಜಿ ನಗರದವರೆಗೆ 7.8 ಕಿಮೀಗಳಷ್ಟಿದ್ದು, ಇದನ್ನು ಟಾಟಾ ಪ್ರಾಜೆಕ್ಟ್ ಮತ್ತು ಡೇವೂ E&C ಕಂಪನಿಗಳು ಅಭಿವೃದ್ಧಿಪಡಿಸಿದೆ. ಮೂರನೇ ಪ್ಯಾಕೇಜ್ 3.6 ಕಿಲೋಮೀಟರ್ಗಳನ್ನು L&T ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ
Discussion about this post