ನರೇಂದ್ರ ಮೋದಿಯವರದ್ದೇ ಸಂಪುಟ ಸಚಿವರೂ ಸರಳ ಜೀವಿಗಳಾಗಿದ್ರೆ ಚೆನ್ನಾಗಿತ್ತು ( Modi declares assets)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ( Modi declares assets) ಕಳೆದ ವರ್ಷಕ್ಕೆ ಹೋಲಿಸಿದರೆ ಮೋದಿಯವರ ಚರಾಸ್ತಿಯಲ್ಲಿ ಏರಿಕೆಯಾಗಿದ್ದು, 26.13 ಲಕ್ಷ ರೂಪಾಯಿ ಏರಿಕೆಯಾಗಿದೆ. ಅವರ ಬಳಿ 2,23 ಕೋಟಿ ಮೌಲ್ಯದ ಆಸ್ತಿ ಇದೆ.
ಗುಜರಾತ್ ನ ಗಾಂಧಿ ನಗರದಲ್ಲಿದ್ದ ಭೂಮಿಯನ್ನು ದಾನ ಮಾಡಿರುವುದರಿಂದ ಅವರ ಬಳಿ ಯಾವುದೇ ಸ್ಥಿರಾಸ್ತಿಗಳಿಲ್ಲ. 2022ರ ಮಾರ್ಚ್ 31ರ ವೇಳೆಗೆ ಮೋದಿಯವರ ಒಟ್ಟು ಆಸ್ತಿ ಮೌಲ್ಯ 2,23,82,504 ರೂಪಾಯಿಯಾಗಿದೆ. ಅಂಚೆ ಕಚೇರಿಯ Savings Certificates ನಲ್ಲಿ Rs 9,05,105 ಹೂಡಿಕೆ ಮಾಡಿರುವ ಪ್ರಧಾನಿಗಳು life insurance policies ಗಳಲ್ಲಿ Rs 1,89,305 ಹೊಂದಿದ್ದಾರೆ.
ಇದನ್ನು ಓದಿ : Janardhana reddy : ಬಳ್ಳಾರಿಯಲ್ಲಿ ಮತ್ತೆ ಗಣಿ ಅಗೆಯಲು ಹೊರಟ ಜನಾರ್ಧನ ರೆಡ್ಡಿ
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಬಳಿ 36,900 ರೂಪಾಯಿ ನಗದು ಇತ್ತು. ಈ ಬಾರಿ ಅದು 35,250ಕ್ಕೆ ಇಳಿದಿದೆ. ಬ್ಯಾಂಕ್ ಖಾತೆಯಲ್ಲಿ ಕಳೆದ ವರ್ಷ 1,52,480 ರೂಪಾಯಿ ಇತ್ತು. ಈ ಬಾರಿ ಅದು 46,555ಕ್ಕೆ ಇಳಿದಿದೆ. ಮೋದಿಯವರು ಯಾವುದೇ ವಾಹನ ಹೊಂದಿಲ್ಲ, ಬಾಂಡ್, ಷೇರು ಗಳಲ್ಲಿ ಹಣ ಹೂಡಿಕೆ ಮಾಡಿಲ್ಲ. ಆದರೆ 1.73 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರ ಹೊಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ.
Discussion about this post