ಮಳೆ ನಿಂತರೂ ಮಳೆ ನಿಂತಿಲ್ಲ ಅನ್ನುತ್ತಾರಲ್ಲ. ಹಾಗಾಗಿದೆ ಕುಮಾರಸ್ವಾಮಿ ಕಥೆ. ಕಬ್ಬು ಬೆಳೆಗಾರರ ಪ್ರತಿಭಟನೆ ಸಂದರ್ಭದಲ್ಲಿ ಮಹಿಳೆಯೊಬ್ಬರನ್ನು ಖಂಡಿಸುವ ಭರದಲ್ಲಿ ಕೊಟ್ಟ ಹೇಳಿಕೆ ಇದೀಗ ನುಂಗಲಾಗದ ತುಪ್ಪವಾಗಿದೆ.
ಇದೀಗ ಕಾಂಗ್ರೆಸ್ ಶಾಸಕಿಯೊಬ್ಬರು, ರಾಜ್ಯದಲ್ಲಿರುವುದು ಮೈತ್ರಿ ಸರ್ಕಾರ ಅನ್ನುವ ಮುಲಾಜಿಲ್ಲದೆ, ಕುಮಾರಸ್ವಾಮಿ ಮಾತುಗಳನ್ನು ಖಂಡಿಸಿದ್ದಾರೆ.
ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಇರುವುದು ರೈತ ಮಹಿಳೆ. ನಾನು ಕಾಂಗ್ರೆಸ್ಸಿನವಳು. ಹೀಗಾಗಿ ಪಕ್ಷದ ಚಿಹ್ನೆಯಲ್ಲಿ ತೆನೆ ಹೊತ್ತ ರೈತ ಮಹಿಳೆಯನ್ನು ಇಟ್ಕೊಂಡು ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಅಂತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಯಾವುದೋ ಒಂದು ಉದ್ವೇಗದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಏನ್ ಮಾಡ್ತಿದ್ದಿಯಮ್ಮಾ, ಯಾಕೆ ವಿಚಾರ ಮಾಡಿಲ್ಲ ಅಂತ ಹೇಳಬಹುದಾಗಿತ್ತು. ಆದ್ರೆ ಉದ್ವೇಗದಲ್ಲಿ ಅದೊಂದು ಪದವನ್ನು ಬಳಸಿದ್ದಾರೆ. ರಾಜಕಾರಣದಲ್ಲಿ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ. ಮಾತು ಆಡಿದ್ರೆ ಸಾಕು, ಮುತ್ತು ಒಡೆದ್ರೆ ಹೋಯ್ತು ಅನ್ನೋ ಪರಿಸ್ಥಿತಿ ಬಂದಿದೆ ಅಂದ್ರು.
Discussion about this post