ಬೆಂಗಳೂರು : ನಕಲಿ ಆಧಾರ್ ಕಾರ್ಡ್ ಬಳಸಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಳ್ಳಸಾಗಣೆಕೆ ಮಾಡುವ ದಂಧೆಯನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಇಂಡಿಯನ್ ಏಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದ್ದು, ಕೆಲಸಕ್ಕಾಗಿ ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತಿದೆ ಎಂದು ತಿಳಿಸಿದೆ.
ಈ ವರದಿಯ ಪ್ರಕಾರ ಈ ವರ್ಷ ಒಂದರಲ್ಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇಂತಹ 224 ಪ್ರಕರಣಗಳನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಗಾದ್ರೆ ರಾಜ್ಯ ಹಾಗೂ ದೇಶದ ವಿವಿಧ ರೈಲು ನಿಲ್ದಾಣಗಳ ಕಥೆ ಹೇಗಿರಬಹುದು.
Minors r being brought by trains from acr India 2 be pushed into child labour in #Bengaluru with fake #Aadhaar cards. KSR stn alone saw 244 kids arr this yr. Maj had Jan 1 as DOB on card, yr fudged @MinistryWCD @ceo_uidai @UIDAIBengaluru @BSBommai @SiriGowriDR1 @NewIndianXpress pic.twitter.com/XER6Kl83AI
— S. Lalitha (@Lolita_TNIE) December 14, 2021
ಮೂಲ ಆಧಾರ್ ಕಾರ್ಡ್ ನ ವಯಸ್ಸಿನ ವಿವರಗಳನ್ನು ತಿದ್ದಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದ್ದು, ಮಕ್ಕಳೊಂದಿಗೆ ಮಾತನಾಡಿದಾಗ ಅವರ ವಯಸ್ಸು ಬೇರೆ ಬೇರೆಯಾಗಿರುವುದು ಗೊತ್ತಾಗಿದೆ.
ನೆರೆಯ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಓಡಿಶಾ, ಜಾರ್ಖಂಡ್ ನಿಂದ ಮಕ್ಕಳನ್ನು ಕರೆ ತರಲಾಗಿದೆ. ಜೊತೆಗೆ ಕರ್ನಾಟಕ ಮಕ್ಕಳೂ ಕೂಡಾ ಇದರಲ್ಲಿ ಸೇರಿದ್ದಾರೆ.
ಮೊದಲ ದಿನವೇ Sold out : ಸಂಪೂರ್ಣ ವಿದ್ಯುತ್ ಚಾಲಿತ BMW IX ಕಾರಿಗೆ ಮುಗಿ ಬಿದ್ದ ಜನತೆ
ನವದೆಹಲಿ : ಸೋಮವಾರವಷ್ಟೇ ಬಿಡುಗಡೆಯಾಗಿರುವ BMW IX ಕಾರು ಮೊದಲ ದಿನವೇ Sold out ಆಗಿದೆ. ಈ ಸಂಬಂಧ ಕಂಪನಿಯೇ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಪೂರ್ಣ ವಿದ್ಯುತ್ ಚಾಲಿತ SAV ವಾಹನ ಬಿಡುಗಡೆ ಮಾಡಿದ ಮೊದಲ ದಿನವೇ ಬುಕ್ಕಿಂಗ್ ಆಗಿದೆ ಅಂದಿದೆ.
ಮೊದಲ ದಿನ ಮೊದಲ ಹಂತದಲ್ಲೇ ಲಭ್ಯವಿದ್ದ ಎಲ್ಲಾ ಕಾರುಗಳನ್ನು ಬುಕ್ಕಿಂಗ್ ಮಾಡಲಾಗಿದ್ದು, ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
2022ರ ಏಪ್ರಿಲ್ ತಿಂಗಳಿನಿಂದ ಕಾರಿನ ವಿತರಣೆ ಪ್ರಾರಂಭವಾಗಲಿದೆ. ಹೀಗಾಗಿ 2002ರ ಮಾರ್ಚ್ ಹೊತ್ತಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭವಾಗಲಿದೆ. ಅಂದ ಹಾಗೇ ಈ ಕಾರಿನ ಬೆಲೆ 1.16 ಕೋಟಿ ರೂಪಾಯಿ
Discussion about this post