ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ ಡಾ. ರಮಣರಾವ್ ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ರಮಣರಾವ್ ಮನೆಯಲ್ಲಿದ್ದರೂ ವೈದ್ಯರು ತಲೆಮರೆಸಿಕೊಂಡಿದ್ದಾರೆ, ನಾಪತ್ತೆಯಾಗಿದ್ದಾರೆ ಅನ್ನುವ ಸುಳ್ಳು ಸುದ್ದಿಯನ್ನು ವಾಹಿನಿಯೊಂದು ಸತತವಾಗಿ ಪ್ರಸಾರ ಮಾಡಿತ್ತು. ಆದರೆ ರಮಣರಾವ್ ತಮ್ಮದೇ ನಿವಾಸದಲ್ಲಿದ್ದರು.
ಈ ನಡುವೆ ಡಾ. ರಮಣರಾವ್ ಅವರನ್ನು ಭೇಟಿ ಮಾಡಿರುವ ಸಚಿವ ಮುನಿರತ್ನ, ಪೂರ್ತಿ ಬೆಳವಣಿಗೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ, ರಮಣರಾವ್ ಅವರನ್ನು ನಾನು ಹಲವು ವರ್ಷಗಳಿಂದ ಬಲ್ಲೆ. ನಾನು ಅವರ ಕ್ಲಿನಿಕ್ ಗೆ ಬಂದು ಹೋಗುತ್ತಿರುತ್ತೇನೆ. 35ಕ್ಕೂ ಹೆಚ್ಚು ವರ್ಷಗಳಿಂದ ರಮಣರಾವ್ ರಾಜ್ ಕುಮಾರ್ ಕುಟುಂಬದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನನಗೂ ಅಪ್ಪು ಅಭಿಮಾನಿಗಳ ಆಕ್ರೋಶ, ನೋವು ಅರ್ಥವಾಗುತ್ತದೆ. ಹಾಗಂತ ವೈದ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಅಂದಿದ್ದಾರೆ.
Discussion about this post