ಹಿಂದೆ ನಡೆದಿಲ್ಲ ಮುಂದೆ ನಡೆದಿಲ್ಲ ಅನ್ನುವಂತೆ ಲೋಕಸಮರದ ಬಹಿರಂಗ ಪ್ರಚಾರದ ಕೊನೆಯ ದಿನ ಸುಮಲತಾ ಅಂಬರೀಶ್ ಸ್ವಾಭಿಮಾನ ಸಮಾವೇಶ ನಡೆಸಿದ್ದಾರೆ.
ಮಂಡ್ಯದ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡಬಹುದಾದ ಘಳಿಗೆಗಳು ಅನ್ನುವಂತೆ ಜೋಡೆತ್ತುಗಳನ್ನು ಕಟ್ಟಿಕೊಂಡ ಸುಮಲತಾ ಪ್ರಚಾರವನ್ನು ಮುಗಿಸಿದ್ದಾರೆ.
ಸುಮಲತಾ ಅಂಬರೀಶ್, ಯಶ್, ದರ್ಶನ್ ಮೂರೂ ಜನ ನಡೆದುಕೊಂಡ ರೀತಿ, ಪ್ರಚಾರ ನಡೆಸಿದ ರೀತಿ ಕರ್ನಾಟಕದ ಚುನಾವಣೆಯಲ್ಲಿಯೇ ಗೌರವಯುತವಾದ ಚುನಾವಣಾ ಕಾರ್ಯ ಅನ್ನಿಸಿಕೊಂಡಿದೆ.
ಒಂದು ಬಾರಿಯೂ ಕೆಟ್ಟ ಭಾಷೆ ಬಳಸಲಿಲ್ಲ, ದ್ವೇಷದ ಮಾತು ಆಡಲಿಲ್ಲ, ವಿರೋಧಿಗಳು ತಿವಿದು ತಿವಿದು ರೊಚ್ಚಿಗೆಬ್ಬಿಸಿದರೂ ಸಂಯಮ ಕಳೆದುಕೊಳ್ಳಲಿಲ್ಲ.
ಅದು ಇಂದಿನ ಸ್ವಾಭಿಮಾನ ಸಮಾವೇಶದಲ್ಲೂ ಕಂಡು ಬಂತು.
ಇದೇ ಸಮಾವೇಶದಲ್ಲಿ ಮಾತನಾಡಿದ ನಟ ದೊಡ್ಡಣ್ಣ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಅಂದು ನಾಮಪತ್ರ ಸಲ್ಲಿಸುವ ದಿನವೂ ಮಂಡ್ಯದಲ್ಲಿ ಕೇಬಲ್ ಕಟ್ ಆಯ್ತು, ಕರೆಂಟ್ ಹೋಯ್ತು. ಇಂದು ಸಮಾವೇಶದ ದಿನ ಸುಮಕ್ಕ ವೇದಿಕೆ ಹತ್ತಿದ ತಕ್ಷಣ ಕೇಬಲ್ ಕಟ್. ಹೀಗಾಗಿ ಈ ಕಾರ್ಯ ಮಾಡಿದವನಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಮೂರು ಜನ ಸುಮಕ್ಕರನ್ನ ಕರೆದುಕೊಂಡ ಬಂದು, ಅದೇ ರೀತಿಯ ಡ್ರೆಸ್ , ಅದೇ ರೀತಿಯ ಕನ್ನಡಕ ಹಾಕಿಸಿದ್ದಾರೆ. ನೋಡೋಣ ಮುಂದೇನಾಗುತ್ತದೆ ಎಂದು.
KSRTC ಬಸ್ ಗಳ ಹಿಂದೆ ತಿಂಗಳು ಆರು ಸಾಧನೆ ಸಾವಿರಾರು ಅನ್ನುವ ಬೋರ್ಡ್ ಅನ್ನು ಗಮನಿಸಿದ್ದೇನೆ. ಆದರೆ ಇಲ್ಲಿ ನೋಡಿದರೆ ಸಾಧನೆ ಇದೇನಾ ಅನ್ನಿಸುತ್ತಿದೆ.
ಏನೇ ಮಾಡಿದರೂ ಮೇಲೊಬ್ಬ ಕೂತಿದ್ದಾನೆ. ಎಲ್ಲವನ್ನೂ ನೋಡುತ್ತಿದ್ದಾನೆ ಅನ್ನುವ ಮೂಲಕ ಎಲ್ಲಾ ಕುತಂತ್ರಗಳಿಗೆ ದೇವರು ತಕ್ಕ ಉತ್ತರ ನೀಡುತ್ತಾನೆ ಎಂದ ದೊಡ್ಡಣ್ಣ ನಂಬರ್ ಇಪ್ಪತ್ತು, ಮಂಡ್ಯಕ್ಕೆ ಸಂಪತ್ತು ಎಂದು ಘೋಷಿಸಿದರು.
Discussion about this post