ತೆಲುಗಿನ ಜನಪ್ರಿಯ ನಿರೂಪಕಿಯ ಮಾತು ಇದೀಗ ಪತ್ರಕರ್ತರ ಕಣ್ಣು ಕೆಂಪಾಗಿಸಿದೆ
ಸಿನಿಮಾ ಈವೆಂಟ್ ಸೇರಿದಂತೆ ಕೆಲ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಸಹಿಸಿಕೊಳ್ಳುವುದೇ ದೊಡ್ಡ ಹಿಂಸೆ. ಅದರಲ್ಲೂ ಕೆಲ ನಿರೂಪಕ/ನಿರೂಪಕಿಯರ ಕೈಗೆ ಮೈಕ್ ಸಿಕ್ರೆ ತಲೆ ಸಿಡಿಯಲಾರಂಭಿಸುತ್ತದೆ. ತಮಗೆಲ್ಲ ಗೊತ್ತು ಅನ್ನುವಂತೆ ಮುಖ್ಯ ಅತಿಥಿಗಳ ಭಾಷಣವನ್ನೂ ಇವರೇ ಮಾಡಿ ಬಿಡುತ್ತಾರೆ.
ಅದೇ ರೀತಿ ತೆಲುಗಿನ ಆದಿಕೇಶವ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕಿ ಸುಮಾ ( Suma Kanakala) ಆಡಿದ ಮಾತು ಇದೀಗ ವಿವಾದ ಸೃಷ್ಟಿಸಿದೆ. ವೈಷ್ಣವ್ ತೇಜ್ ಮತ್ತು ಶ್ರೀಲೀಲಾ ನಟಿಸಿರುವ ಸಿನಿಮಾ ಆದಿಕೇಶವ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದ ಸುಮಾ, ಪತ್ರಕರ್ತರು ಸ್ನಾಕ್ಸ್ ಅನ್ನು ಊಟದಂತೆ ತಿನ್ನುತ್ತಿದ್ದಾರೆ, ಅವರು ತಿನ್ನೋದು ಮುಗಿದ ಬಳಿಕ ಕಾರ್ಯಕ್ರಮ ಶುರು ಮಾಡೋಣ ಎಂದು ವೇದಿಕೆಯಲ್ಲೇ ಹೇಳಿದ್ದರು.
Read This : ಸದಾನಂದಗೌಡರೂ ಅಲ್ಲ ಶೋಭಾಕ್ಕನಿಗೂ ಇಲ್ಲ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಫಿಕ್ಸ್
ಇದು ಅಲ್ಲಿದ್ದ ಪತ್ರಕರ್ತರಿಗೆ ಇರುಸು ಮುರುಸು ಉಂಟು ಮಾಡಿತ್ತು. ಪತ್ರಕರ್ತರು ಅಂದ್ರೆ ತಿನ್ನೋದಿಕ್ಕೆ ಬರುತ್ತಾರೆ ಅನ್ನುವ ಸಂದೇಶ ರವಾನಿಸುವ ಹಾಗಿತ್ತು, ಸುಮಾ ಅವರಾಡಿದ ಮಾತು. ಹೀಗಾಗಿ ಸುಮಾ ಮಾತಿಗೆ ವಿರೋಧ ವ್ಯಕ್ತಪಡಿಸಿದ ಪತ್ರಕರ್ತರೊಬ್ಬರು ಅಲ್ಲೇ ಜಾಡಿಸಿದ್ದರು. ಆಗ್ಲೂ ಪಟ್ಟು ಬಿಡದ ನಿರೂಪಕಿ ಸುಮಾ ನಾನು ಜೋಕ್ಸ್ ಗಾಗಿ ಹಾಗೇ ಅಂದೆ ಅಂದಿದ್ದಾರೆ.
ಕಾರ್ಯಕ್ರಮ ಮುಗಿದ ಬಳಿಕವೂ ಸುಮಾ ಅವರಾಡಿದ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಲಾರಂಭಿಸಿತು. ಸುಮಾ ಅವರ ಮಾತು ಖಂಡಿಸಿದ ಹಿರಿಯ ಪತ್ರಕರ್ತರು ಇದು ನಿಮಗೆ ಶೋಭೆಯಲ್ಲ ಅಂದಿದ್ದಾರೆ. ಒಂದು ಹಂತದಲ್ಲಿ ಸುಮಾ ಅವರ ನಿರೂಪಣೆಯ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಬಗ್ಗೆಯೂ ಚರ್ಚೆಗಳು ನಡೆದಿತ್ತು.
ಈ ನಡುವೆ ಇದೀಗ ಎಚ್ಚೆತ್ತುಕೊಂಡಿರುವ ನಿರೂಪಕಿ ಬಹಿರಂಗ ಕ್ಷಮೆ ಕೇಳಿದ್ದು, ನಿಮ್ಮ ಕುಟುಂಬ ಸದಸ್ಯೆಯಂದು ನನ್ನ ಮಾತುಗಳನ್ನು ಕ್ಷಮಿಸಿ ಎಂದು ಕೋರಿದ್ದಾರೆ.
Discussion about this post