ಬೆಂಗಳೂರು : ಕೊರೋನಾ ಸೋಂಕಿನ ಮೂರನೇ ಅಲೆ ಅಂತ್ಯವಾಗಿದೆ. ಜೂನ್ ಹೊತ್ತಿಗೆ ನಾಲ್ಕನೇ ಅಲೆ ಮರುಕಳಿಸಲಿದೆ ಅನ್ನುವ ಸುದ್ದಿಯ ನಡುವೆ ಗುರುವಾರ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬುಧವಾರ 106ರಷ್ಟಿದ್ದ ಸೋಂಕಿತರ ಸಂಖ್ಯೆ ಗುರುವಾರ 239ಕ್ಕೆ ಜಿಗಿದಿದೆ.
ಕಳೆದ ಕೆಲ ವಾರಗಳಿಂದ 100ರ ಅಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ 200 ಗಡಿ ದಾಟಿರುವುದು ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಒಟ್ಟು 17,343 ಕೋರೋನಾ ಪರೀಕ್ಷೆ ನಡೆಸಲಾಗಿದ್ದು, ಶೇ 1.15ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ. ಪ್ರಸ್ತುತ 2630 ಸಕ್ರಿಯ ಪ್ರಕರಣಗಳು ರಾಜಧಾನಿಯಲ್ಲಿದ್ದು, 110 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ 15 ಮಂದಿ ವೆಂಟಿಲೇಟರ್ ನಲ್ಲಿದ್ದು, 30 ಮಂದಿ ಐಸಿಯುನಲ್ಲಿದ್ದಾರೆ. 14 ಮಂದಿ ಆಮ್ಲಜನಕ ಹಾಸಿಗೆಯಲ್ಲಿದ್ದು, 51 ಮಂದಿ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Discussion about this post