ಬಿಗ್ ಬಾಸ್ ಸೀಸನ್ 8ಕ್ಕೆ ತೆರೆ ಬೀಳಲು ಇನ್ನು ಕೆಲವೇ ಗಂಟೆಗಳು ಬಾಕಿ. ಈಗಾಗಲೇ ಬಿಡದಿಯ ಸೆಟ್ ನಲ್ಲಿ ಫಿನಾಲೆ ಕಾರ್ಯಕ್ರಮದ ಶೂಟಿಂಗ್ ನಡೆಯುತ್ತಿದ್, ದಿವ್ಯಾ ಉರುಡುಗ ಅವರು ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ. ಉಳಿದಂತೆ ವೈಷ್ಣವಿ ಗೌಡ ಅವರ ಜೊತೆಗೆ ಮಾತುಕತೆಯನ್ನು ಮುಕ್ತಾಯಗೊಳಿಸಿರುವ ಸುದೀಪ್ ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಈ ನಡುವೆ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಅನ್ನುವ ಕುರಿತಂತೆ ಹಲವು ಲೆಕ್ಕಚಾರಗಳು ನಡೆಯುತ್ತಿದ್ದು, ಬಹುತೇಕರು ಮಂಜು ಪಾವಗಡ ಗೆಲ್ಲುವುದು ಖಚಿತ ಅಂದಿದ್ದಾರೆ. ಅರವಿಂದ್ ಗೆಲ್ಲುವ ಎಲ್ಲಾ ಸಾಧ್ಯತೆಗಳಿತ್ತು. ಆದರೆ ದಿವ್ಯಾ ಉರುಡುಗ ಕಾರಣಕ್ಕೆ ಅವರು ಫೈನಲ್ ನಲ್ಲಿ ಸೋಲಬಹುದು ಅನ್ನಲಾಗಿದೆ. ಬಿಗ್ ಬಾಸ್ ಒಂದು ಫ್ಯಾಮಿಲಿ ಶೋ ಆಗಿತ್ತು. ಆದರೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರ ಪ್ರೀತಿಯಾಟಗಳನ್ನು ಮಕ್ಕಳ ಜೊತೆ ಕೂತು ನೋಡುವ ಹಾಗಿರಲಿಲ್ಲ. ಒಂದು ಮಟ್ಟಿಗೆ ಇವರಿಬ್ಬರ ಪ್ರೀತಿ ಅಸಹ್ಯ ಅನ್ನಿಸಿದ್ದು ಸುಳ್ಳಲ್ಲ. ಕೆಲವರಂತು ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಮನೆಯೇನು ಕಬ್ಬನ್ ಪಾರ್ಕ್ ಆಗೋಯ್ತೇ ಎಂದು ಟೀಕಿಸಿದ್ದರು ಕೂಡಾ.
ಪ್ರತಿಯೊಂದು ಸಂಬಂಧಕ್ಕೂ ಲಕ್ಷ್ಮಣ ರೇಖೆ ಅನ್ನುವುದು ಇರುತ್ತದೆ. ಅದು ಕೂಡಾ ರಿಯಾಲಿಟಿ ಶೋ ಗಳಲ್ಲಿ ಈ ರೀತಿ ಮೈ ಮೇಲೆ ಬಿದ್ದು ಆಡುವುದನ್ನು ಕನ್ನಡದ ವೀಕ್ಷಕರು ಇಷ್ಟ ಪಡುವುದಿಲ್ಲ. ಹಿಂದಿ ಮತ್ತು ಇಂಗ್ಲೀಷ್ ರಿಯಾಲಿಟಿ ಶೋಗಳಲ್ಲಿ ಅವೆಲ್ಲಾ ಮಾಮೂಲಿ.
ಈ ನಡುವೆ ನಿನ್ನೆ ನಿರೀಕ್ಷೆಯಂತೆ ಸಂಬರಗಿ ಮನೆಯಿಂದ ಹೊರ ಹೋಗಿದ್ದಾರೆ. ಅಚ್ಚರಿ ಅಂದ್ರೆ ವೈಷ್ಣವಿ ಗೌಡ ಎಲಿಮಿನೇಷನ್. ಹೀಗಾಗಿ ಇದೀಗ ಬಿಗ್ ಬಾಸ್ ಮನೆಯಲ್ಲಿ ಮಂಜು, ಅರವಿಂದ್, ದಿವ್ಯಾ ಉಳಿದುಕೊಂಡಿದ್ದಾರೆ.
Discussion about this post