ಮಂಗಳೂರು : ಕರಾವಳಿ ಭಾಗದಲ್ಲಿ ಒಂದಿಷ್ಟು ವರ್ಷಗಳ ಕಾಲ ಶಾಂತಿ ನೆಮ್ಮದಿ ನೆಲೆಸಿತ್ತು. ಆದರೆ ಕೊರೋನಾದಿಂದಲೂ ಪಾಠ ಕಲಿಯದ ಮಂದಿ ಇತ್ತೀಚಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಾರಂಭಿಸಿದ್ದಾರೆ. ಕಾನೂನು ಬಗ್ಗೆ ಗೌರವ ಇಲ್ಲದ ಇವರಿಗೆ ಪೊಲೀಸರ ಭಯವೂ ಇಲ್ಲದಂತಾಗಿದೆ.
ಈ ನಡುವೆ ಮಂಗಳೂರು ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ಅವರು ಬಂದಾಗ ಸಾಕಷ್ಟು ನಿರೀಕ್ಷೆಗಳಿತ್ತು. ಬೆಂಗಳೂರಿನಲ್ಲಿ ರೌಡಿಗಳ ಹೆಡೆಮುರಿ ಕಟ್ಟಿದವರು ಕರಾವಳಿಯಲ್ಲೂ ಖಾರವಾಗಿರ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಆಯುಕ್ತ ಶಶಿಕುಮಾರ್ ಅದ್ಯಾಕೋ ಬೆಂಗಳೂರಿನ ಖದರ್ ತೋರಿಸಲು ಮನಸ್ಸು ಮಾಡಿಲ್ಲ. ಹೀಗಾಗಿಯೇ ಸಮಾಜ ದ್ರೋಹಿಗಳು ಬಾಲ ಬಿಚ್ಚಿದ್ದಾರೆ.
ಇದಕ್ಕೆ ಸಾಕ್ಷಿ ಅನ್ನುವಂತೆ ನೈತಿಕ ಪೊಲೀಸ್ ಗಿರಿ ಮತ್ತೆ ಸದ್ದು ಮಾಡಲಾರಂಭಿಸಿದೆ. ದನ ಕಳ್ಳತನ ಸುದ್ದಿಯಾಗಲಾರಂಭಿಸಿದೆ. ಅಷ್ಟೇ ಅಲ್ಲದೆ ಕೋಮು ಭಾವನೆ ಪ್ರಚೋದಿಸುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಮೂಡುಶೆಡ್ಡೆಯಲ್ಲಿ 10ಕ್ಕೂ ಹೆಚ್ಚು ಮತಾಂಧರು ಸಂಘಟನೆಯೊಂದರ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಬಂದು ಕೊಲೆ ಮಾಡಲು ಯತ್ನಿಸಿದ್ದಾರೆ ಅನ್ನುವ ವಿಡಿಯೋ ಹರಿದಾಡುತ್ತಿದೆ.
ಇಷ್ಟೆಲ್ಲಾ ಘಟನೆಗಳು ಪದೇ ಪದೇ ನಡೆಯುತ್ತಿದೆ ಅಂದರೆ ಅದು ಪೊಲೀಸ್ ಇಲಾಖೆಯ ವೈಫಲ್ಯವಲ್ಲದೇ ಮತ್ತೇನೂ ಅಲ್ಲ. ಹೋಗ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗಾದ್ರು ಈ ಬಗ್ಗೆ ಗೊತ್ತಿದೆಯೋ ಇಲ್ಲವೋ, ಇನ್ನು ಈಗಿನ ಸಿಎಂ ಆಗ ಗೃಹ ಸಚಿವರಾಗಿದ್ದವರು, ಅಷ್ಟೇ ಯಾಕೆ ಗುಪ್ತಚರದಳ ಸಿಎಂ ಕೈ ಕೆಳಗಡೆಯೇ ಕೆಲಸ ಮಾಡುತ್ತಿದೆ. ಪ್ರತೀ ನಿತ್ಯ ಬೆಳಗ್ಗೆ ಗುಪ್ತಚರದಳದ ಮುಖ್ಯಸ್ಥರು ಸಿಎಂಗೆ ವರದಿ ಮಾಡಬೇಕು, ಅದಾಕ್ಯೋ ಮಂಗಳೂರು ಪೊಲೀಸರ ವೈಫಲ್ಯದ ವರದಿ ಒಪ್ಪಿಸಲು ಅವರು ಮರೆತಿರುವಂತಿದೆ.
Discussion about this post