ಪುನರ್ವಸು ಮಳೆಗೆ ಕರಾವಳಿ ತತ್ತರಿಸಿದ್ದು, ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಈ ನಡುವೆ ಜುಲೈ 26ರ ತನಕ ಮಳೆ ಅಬ್ಬರಿಸಲಿದೆ ಎಂದು ಹವಮಾನ ಇಲಾಖೆ ಎಚ್ಚರೆ ನೀಡಿದೆ. ಈ ನಡುವೆ ಜುಲೈ 23 ರಂದು ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 24 ರಂದು ಆರೆಂಜ್ ಆಲರ್ಟ್ ನೀಡಲಾಗಿದೆ. ಈ ಎರಡೂ ಆಲರ್ಟ್ ಗಳು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಅನ್ವಯಿಸುತ್ತದೆ.
ಈ ನಡುವೆ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬೆಳಗಾವಿ, ಧಾರವಾಡ ದಲ್ಲೂ ಉತ್ತಮ ಮಳೆ ನಿರೀಕ್ಷಿಸಲಾಗಿದ್ದು ಜುಲೈ 23 ರಂದು ಆರೆಂಜ್ ಆಲರ್ಟ್ ನೀಡಲಾಗಿದೆ.ಬೀದರ್, ಗದಗ, ಹಾವೇರಿ, ಕಲಬುರಗಿ, ಯಾದಗಿರಿಯಲ್ಲೂ ಮುಂದಿನ 24 ಉತ್ತಮ ಮಳೆ ಸುರಿಯುವ ಸಾಧ್ಯತೆಗಳಿದ್ದು ಟೆಲ್ಲೋ ಅಲರ್ಟ್ ನೀಡಲಾಗಿದೆ.
ಈ ನಡುವೆ ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಆಲಮಟ್ಟಿಗೆ ಅಪಾರ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆಯಿದೆ. ಹೀಗಾಗಿ ಮುಂದಿನ ಎರಡು ದಿನದೊಳಗೆ ಜಲಾಶಯದ ಒಳಹರಿವು 1.5 ಲಕ್ಷ ಕ್ಯುಸೆಕ್ ದಾಟುವ ನಿರೀಕ್ಷೆಯಿದ್ದು, ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ 1.30 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
24 ಗೇಟ್ ಮೂಲಕ ನೀರು ಹೊರಕ್ಕೆ ಬಿಡಲಾಗಿದ್ದು 26 ಗೇಟ್ಗಳ ಪೈಕಿ 6 ಗೇಟ್ಗಳನ್ನು 1 ಮೀಟರ್, 18 ಗೇಟ್ಗಳನ್ನು 0.8 ಮೀಟರ್ ಗೆ ಹೆಚ್ಚಿಸಲಾಗಿದೆ. ಜೊತೆಗೆ ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಕೊಯ್ನಾ, ಧೋಮ, ಕನ್ಹೇರ, ದೂದಗಂಗಾ ಸೇರಿ ಬಹುತೇಕ ಜಲಾಶಯಗಳು ಶೇ 70ರಷ್ಟು ಭರ್ತಿಯಾಗಿದೆ. ಅದರಲ್ಲೂ ಕೊಯ್ನಾ ಜಲಾಶಯಕ್ಕೆ 1.79 ಲಕ್ಷ ಕ್ಯುಸೆಕ್ ಒಳಹರಿವು ಸೃಷ್ಟಿಯಾಗಿದ್ದು ಅವರೇನಾದರೂ ಅಪಾರ ಪ್ರಮಾಣದ ನೀರನ್ನು ಹೊರ ಬಿಟ್ಟರೆ, ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಗ್ಯಾರಂಟಿ.
Discussion about this post