ಇದೊಂದು ಆತಂಕಕಾರಿ ಮತ್ತು ಕಳವಳಕಾರಿ ವಿಚಾರ. ಮದ್ಯಪಾನದಿಂದ ಅನೇಕ ಆಪತ್ತುಗಳಿದೆ. ಹಾಗಿದ್ದರೂ ಬುದ್ದಿವಂತರ ಜಿಲ್ಲೆಯಲ್ಲಿ ಮದ್ಯಪಾನಿಗಳ ( mangalore liquor ) ಸಂಖ್ಯೆ ಏರುತ್ತಿರುವುದು ಅಪಾಯಕಾರಿ ಬೆಳವಣಿಗೆ
ಮಂಗಳೂರು : ಬುದ್ದಿವಂತರ ಜಿಲ್ಲೆ ಎಂದೇ ಕರೆಸಿಕೊಂಡಿರುವ ದಕ್ಷಿಣ ಕನ್ನಡ ( dakshina kannada ) ಮದ್ಯ ಮಾರಾಟದಲ್ಲಿ ನಂಬರ್ 1 ಪಟ್ಟಕ್ಕೆ ಏರುವ ಮೂಲಕ ದೇಶದ ಮುಂದೆ ತಲೆ ತಗ್ಗಿಸಿ ನಿಂತಿದೆ. ಹಿಂದೆಲ್ಲಾ SSLCಯಲ್ಲಿ ಟಾಪ್, PUCಯಲ್ಲಿ ಟಾಪ್ ಅನ್ನಿಸಿಕೊಂಡಿದ್ದ ಜಿಲ್ಲೆ ಮದ್ಯ ಮಾರಾಟದಲ್ಲಿ ( mangalore liquor ) ಟಾಪ್ ಅನ್ನಿಸಿಕೊಂಡಿದೆ.
ಅಬಕಾರಿ ಇಲಾಖೆಯ ಮಾಹಿತಿಯ ಪ್ರಕಾರ ಜಿಲ್ಲೆಯ ( dakshina kannada ) ಕುಡುಕರ ಸಂಖ್ಯೆ ಹೆಚ್ಚಾಗಿದೆ. ವರ್ಷದಲ್ಲಿ 2.2 ಕೋಟಿ ಲೀಟರ್ ಹಾರ್ಡ್ ಲಿಕ್ಕರ್ ಹಾಗೂ 1.4 ಕೋಟಿ ಲೀಟರ್ ಬಿಯರ್ ಅನ್ನು ಜಿಲ್ಲೆ ತನ್ನ ಹೊಟ್ಟೆಗಿಳಿಸಿಕೊಂಡಿದೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 25 ಲಕ್ಷ ಹಾರ್ಡ್ ಡ್ರಿಂಕ್ಸ್ ಮದ್ಯವನ್ನು ಸೇವಿಸಲಾಗಿದ್ದು. ಸರಾಸರಿ 18 ಲಕ್ಷ ಬಾಕ್ಯ್ ಬಿಯರ್ ಅನ್ನು ಕರಾವಳಿ ಮಂದಿ ಹೊಟ್ಟೆಗಿಳಿಸಿದ್ದಾರೆ. ಹೀಗಾಗಿಯೇ ಈ ಆರ್ಥಿಕ ವರ್ಷದಲ್ಲಿ 370 ಕೋಟಿ ಆದಾಯವನ್ನು ಕರಾವಳಿಯವರೇ ಕೊಟ್ಟಿದ್ದಾರೆ.
ಇದನ್ನೂ ಓದಿ : national education policy : ಮೊಟ್ಟೆ ಬೇಡ… ಮಕ್ಕಳಿಗೆ ಶೂ ಬೇಡ : ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಕರಡಿನಲ್ಲಿ ಸೂಚನೆ
ಇನ್ನು ಟೈಮ್ಸ್ ಇಂಡಿಯಾ ವರದಿಯ ಪ್ರಕಾರ ದಕ್ಷಿಣ ಕನ್ನಡ ( dakshina kannada ) ಜಿಲ್ಲೆಯಲ್ಲಿ ಕಳೆದ ವರ್ಷ 463 ಮದ್ಯದಂಗಡಿಗಳಿತ್ತು, ಆ ಸಂಖ್ಯೆ ಈಗ 520ಕ್ಕೆ ಏರಿದೆ. ಹಾಗಾದ್ರೆ ಬುದ್ದಿವಂತರ ಜಿಲ್ಲೆಯ ಜನ ದಡ್ಡರಾದ್ರ, ಮದ್ಯದಂಗಡಿ ಸಂಖ್ಯೆ ಏರುತ್ತಿರುವುದನ್ನು ನೋಡಿದ್ರೆ ಹೌದು ಅನ್ನಿಸುತ್ತದೆ. ಹೀಗೆ ಮದ್ಯದಂಗಡಿಗಳು ಬಾಗಿಲು ತೆರೆಯುತ್ತಾ ಹೋದ್ರೆ ನಾಳೆ ಜಿಲ್ಲೆಯ ಕಥೆ ಏನಾಗಬೇಡ, ಯೋಚಿಸಬೇಕಾದ ವಿಚಾರ.
ಹಾಗಾದ್ರೆ ಇಷ್ಟೆಲ್ಲಾ ಎಣ್ಣೆ ಮಾರಾಟವಾದ ಕಾರಣಕ್ಕೆ ಕರಾವಳಿಯನ್ನು ಕುಡುಕರ ಜಿಲ್ಲೆ ಅನ್ನುವುದು ಸರಿಯೇ ಖಂಡಿತಾ ತಪ್ಪಾಗುತ್ತದೆ. ದಕ್ಷಿಣ ಕನ್ನಡದ ಮದ್ಯದಂಗಡಿಯಲ್ಲಿ ಎಣ್ಣೆ ಖರೀದಿಸಿದವರೆಲ್ಲಾ ಕರಾವಳಿಯವರಲ್ಲ. ಹೇಳಿ ಕೇಳಿ ದಕ್ಷಿಣ ಕನ್ನಡ ಪ್ರವಾಸೋದ್ಯಮ ತಾಣ. ಇಲ್ಲಿಗೆ ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಸಾಕಷ್ಟು ಮಂದಿ ಬರುತ್ತಾರೆ. ಬರುವವರೆಲ್ಲಾ ಮದ್ಯವನ್ನು ಜಿಲ್ಲೆಯಲ್ಲೇ ಖರೀದಿಸುತ್ತಾರೆ. ಪ್ರವಾಸಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮದ್ಯ ಮಾರಾಟ ಕೂಡಾ ಹೆಚ್ಚಾಗುತ್ತದೆ. ಇನ್ನು ದಕ್ಷಿಣ ಕನ್ನಡ ಪಕ್ಕದ ಕೇರಳಕ್ಕೆ ಹೆಗಲು ಕೊಟ್ಟು ನಿಂತಿರುವ ಜಿಲ್ಲೆ. ಕೇರಳದ ಗಡಿ ಭಾಗದ ಮಂದಿ ಮದ್ಯ ಸೇವನೆಗೆ ಕರ್ನಾಟಕವನ್ನೇ ಅವಲಂಭಿಸಿದ್ದಾರೆ. ಇದು ಕೂಡಾ ಮದ್ಯ ಮಾರಾಟ ಹೆಚ್ಚಾಗಲು ಕಾರಣ.
ಇದನ್ನೂ ಓದಿ : lalit modi sushmita sen : ವಂಚಕ ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್
ಅಷ್ಟು ಮಾತ್ರವಲ್ಲದ ಅಬಕಾರಿ ಇಲಾಖೆಯ ಮಾಹಿತಿಯ ಪ್ರಕಾರ ಮಾರಾಟವಾದ ಮದ್ಯದ ಪೈಕಿ ಅಗ್ಗದ ಮದ್ಯವೇ ಹೆಚ್ಚು. ಶೇ 85ರಷ್ಟು ಅಗ್ಗದ ಮದ್ಯ ಮಾರಾಟವಾಗಿದೆ. ಶೇ3ರಷ್ಟು ಮಂದಿ ಮಾತ್ರ ಡಿಲಕ್ಸ್, ಸ್ಕಾಚ್, ಸಿಂಗಲ್ ಮಾಲ್ಟ್ , ಪ್ರೀಮಿಯಂ ಖರೀದಿಸಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಕಂಪನಿಗಳಿದೆ, ಅನೇಕ ಕಾಮಗಾರಿ ನಡೆಯುತ್ತಿದೆ. ಈ ಎಲ್ಲಾ ಸ್ಥಳಗಳಿಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕಾರ್ಮಿಕರು ಬಂದಿದ್ದಾರೆ. ಬಂದ ಕಾರ್ಮಿಕರ ಪೈಕಿ ಅನೇಕರು ಅಗ್ಗದ ಮದ್ಯದ ಮೊರೆ ಹೋಗುತ್ತಾರೆ. ಇದು ಮದ್ಯ ಮಾರಾಟ ಹೆಚ್ಚಾಗಲು ಕಾರಣ ಅನ್ನುವುದನ್ನು ಮರೆಯುವಂತಿಲ್ಲ.
ಆದರೆ ಜಿಲ್ಲೆಯಲ್ಲಿ ಮದ್ಯದಂಡಿಗಳ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರ ಅಪಾಯಕಾರಿ ಬೆಳವಣಿಗೆ, ಈ ಬಗ್ಗೆ ಜಿಲ್ಲೆಯ ನಾಯಕರು, ರಾಜಕೀಯ ಮುಖಂಡರು ಎಚ್ಚೆತ್ತುಕೊಳ್ಳಬೇಕಿದೆ.
Discussion about this post