ಬಂಟ್ವಾಳ : ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಗುರುಪುರದ ರಿಕ್ಷಾ ಚಾಲಕನೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಿಕ್ಷಾ ಡ್ರೈವರ್ ಮಹಮ್ಮದ್ ಆಲಿ ಎಂದು ಗುರುತಿಸಲಾಗಿದೆ.
ಬಂಟ್ವಾಳ ತಾಲೂಕಿನ ಮಹಿಳೆಯೊಬ್ಬರಿಗೆ ತಾನು ಅನಿಲ್ ಶೆಟ್ಟಿ ಬ್ಯುಸಿನೆಸ್ ಮ್ಯಾನ್ ಎಂದು ಫೇಸ್ ಬುಕ್ ನಲ್ಲಿ ಪರಿಚಯಿಸಿಕೊಂಡಿದ್ದ. ಇದಾದ ಬಳಿಕ ಆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಈ ಸಂಬಂಧ ನೊಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹೀಗಾಗಿ ಆರೋಪಿಯ ಜಾಡು ಹಿಡಿದ ಹೊರಟ ಪೊಲೀಸರಿಗೆ ಸಿಕ್ಕಿದ್ದು ಅನಿಲ್ ಶೆಟ್ಟಿಯಲ್ಲ, ಬದಲಿಗೆ ಮಹಮ್ಮದ್ ಆಲಿ. ವಿಚಾರಣೆ ನಡೆಸಿದರೆ ನನ್ನದೆಲ್ಲವೂ ನಕಲಿ ಖಾತೆಯ ವ್ಯವಹಾರ ಎಂದು ಬಾಯಿ ಬಿಟ್ಟಿದ್ದಾನೆ,
ಈತ ಮತ್ತಷ್ಟು ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಅನ್ನುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
Discussion about this post