ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿ ರಾಜೀವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಗಗನ್ ಚಿನ್ನಪ್ಪ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ. ಇದಕ್ಕೆ ಮುನ್ನುಡಿ ಅನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದನ್ನೆಯ ಪರಿಚಯ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಅವರು , ನನ್ನ ಹೃದಯಕ್ಕೆ ಖುಷಿ ತಂದ ವಿಶೇಷ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನಷ್ಟೇ, ನಿನ್ನ ನಗುವಿನಷ್ಟೇ ಈ ದಿನ ಸುಂದರವಾಗಿರಲಿ. ನೀನು ನೀಡಿದ ಎಲ್ಲ ನೆನಪಿನ ಬುತ್ತಿಗಳಿಗೂ ಧನ್ಯವಾದಗಳು. ನಮಗೆ ಎಷ್ಟೇ ವಯಸ್ಸಾದರೂ, ಎಷ್ಟೇ ಹುಟ್ಟುಹಬ್ಬವನ್ನು ಆಚರಿಸಿದರೂ ಕೂಡ ನಾನು ಸದಾ ನಿನ್ನ ಜೊತೆಗೆ ಇರುತ್ತೇನೆ. ಇದು ನಮ್ಮ ಮೊದಲ ಫೋಟೋ. ನಾನು, ನೀನು ಭೇಟಿಯಾಗಿ 5 ವರ್ಷ ಆಯ್ತು” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೂಡಾ ಬಂದಿದ್ದು ನಾವಿಬ್ಬರೂ ಒಟ್ಟಿಗೆ ಇನ್ನಷ್ಟು ವರ್ಷ ಕಳೆಯೋದು ಬಾಕಿಯಿದೆ” ಎಂದಿದ್ದಾರೆ.
ಅಂದ ಹಾಗೇ ಗಗನ್ ಪ್ರೀತಿಸುತ್ತಿರುವ ಹುಡುಗಿ ಪ್ರಾರ್ಥನಾ ನಾಣಯ್ಯ, ಇವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು. ನಟಿ ಶುಭ್ರಾ ಅಯ್ಯಪ್ಪ, ಶ್ವೇತಾ ಶ್ರೀವಾಸ್ತವ ಸೇರಿದಂತೆ ಅನೇಕ ನಟಿಯರಿಗೆ ಅವರು ಮೇಕಪ್ ಮಾಡಿದ್ದಾರೆ.
Discussion about this post