ಬೆಂಗಳೂರು : ಬಸವರಾಜ್ ಬೊಮ್ಮಾಯಿ ಸಿಎಂ ಆದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿಗಿಯಾಗುತ್ತದೆ ಅನ್ನುವ ನಿರೀಕ್ಷೆ ಇತ್ತು. ಹಾಗೇ ನೋಡಿದರೆ ಬೊಮ್ಮಾಯಿ ಗೃಹ ಸಚಿವರಾಗಿದ್ದ ವೇಳೆಯೇ ಕಾನೂನು ಸುವ್ಯವಸ್ಥೆ ಚೆನ್ನಾಗಿತ್ತು. ಆರಗ ಜ್ಞಾನೇಂದ್ರ ಅವರಿಗೆ ಪೊಲೀಸ್ ಇಲಾಖೆಯ ಮೇಲೆ ಹಿಡಿತ ಸಿಕ್ಕಂತೆ ಕಾಣಿಸುತ್ತಿಲ್ಲ. ಇಲ್ಲವಾಗಿದ್ರೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಈ ಮಟ್ಟಿಗೆ ಹದೆಗೆಡುತ್ತಿರಲಿಲ್ಲ.
ಈ ನಡುವೆ ಮಂಡ್ಯ ರಾಜಕಾರಣಿಗಳ ಒತ್ತಡಕ್ಕೆ ಬಸವರಾಜ ಬೊಮ್ಮಾಯಿ ಮಣಿದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರ ಬುಧವಾರ 9 ಮಂದಿ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿತ್ತು. ಆ ಪೈಕಿ ವಿವಾದಕ್ಕೆ ಗುರಿಯಾಗಿದ್ದ ಮಂಡ್ಯ ಎಸ್ ಪಿ ಅಶ್ವಿನಿ ವರ್ಗಾವಣೆಯೂ ಸೇರಿತ್ತು. ಅಶ್ವಿನಿ ಜಾಗಕ್ಕೆ ಖಡಕ್ಕ್ ಐಪಿಎಸ್ ಅಧಿಕಾರಿ ಈ ಸುಮನ್.ಡಿ.ಪನ್ನೇಕರ್ ಅವರನ್ನು ನೇಮಿಕ ಮಾಡಲಾಗಿತ್ತು. ನಿಗದಿಯಂತೆ ಗುರುವಾರ ಅವರು ಅಧಿಕಾರ ಸ್ವೀಕರಿಸಬೇಕಾಗಿತ್ತು. ಇನ್ನೂ 2 ದಿನ ಅಧಿಕಾರ ವಹಿಸಕೊಳ್ಳದಂತೆ ಸರ್ಕಾರದ ಕಡೆಯಿಂದ ಮೌಖಿಕ ಸೂಚನೆ ಹೋಗಿದೆ ಅನ್ನಲಾಗಿದೆ.
ಮಾಹಿತಿಗಳ ಪ್ರಕಾರ ಸುಮನ್.ಡಿ.ಪನ್ನೇಕರ್ ಬಂದ್ರೆ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಸೇರಿದಂತೆ ಜನಪ್ರತಿನಿಧಿಗಳ ಹಾರೈಕೆಯಿಂದ ನಡೆಯುವ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ.ಜೊತೆಗೆ ಸುಮನ್ ಹೆಸರು ಕೇಳಿದ್ರೆ ರಾಜಕಾರಣಿಗಳೂ ಬೆವರುತ್ತಾರೆ. ಹೀಗಾಗಿ ಬೇರೆ ಯಾರನ್ನಾದ್ರೂ ಮಂಡ್ಯ ಎಸ್ ಪಿ ಮಾಡಿ, ಸುಮನ್ ಡಿ ಪನ್ನೇಕರ್ ಬೇಡ ಎಂದು ಮಂಡ್ಯದ ಜನಪ್ರತಿನಿಧಿಗಳು ಒತ್ತಡ ತಂದಿದ್ದಾರೆ ಅನ್ನಲಾಗಿದೆ.
Discussion about this post