ಮಂಡ್ಯ : ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಗೆ ಇದೀಗ ತೀವ್ರ ಟೀಕೆಗಳು ಕೇಳಿ ಬರುತ್ತಿದೆ. ಜೊತೆಗೆ ಇಡೀ ಪ್ರಕರಣ ಹಳ್ಳ ಹಿಡಿಯೋದು ಖಚಿತ ಅನ್ನುವ ಮುನ್ಸೂಚನೆಯನ್ನು ಅನೇಕ ನಾಯಕರ ಹೇಳಿಕೆಗಳು ಕೊಡುತ್ತಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಪೊಲೀಸರು ಈಗ ಪ್ರಕರಣವನ್ನು ಹಳ್ಳ ಹಿಡಿಸಬಹುದು. ಆದರೆ ಮುಂದೊಂದು ದಿನ ಕುಮಾರಸ್ವಾಮಿ ಸರ್ಕಾರ ಬಂದಾಗ ಇದೇ ಪ್ರಕರಣವನ್ನು ಸಿಬಿಐನಿಂದ ತನಿಖೆ ಮಾಡಿಸಿ ಸಂತ್ರಸ್ಥೆಗೆ ನ್ಯಾಯ ಕೊಡುತ್ತೇವೆ ಅಂದಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಅವರು ಪೊಲೀಸರು ಪ್ರಕರಣದಲ್ಲಿ ನ್ಯಾಯ ಕೊಡಿಸಲು ವಿಫಲರಾದರೆ, ಈ ಬಗ್ಗೆ ದೂರು ದಾಖಲು ಮಾಡಿ ಸಿಬಿಐ ತನಿಖೆಯ ಹೋರಾಟಕ್ಕೆ ಮುಂದಾಗುತ್ತೇವೆ ಅಂದಿದ್ದಾರೆ.
ಅತ್ಯಾಚಾರಿ ಆರೋಪ ಹೊತ್ತಿರುವ ರಮೇಶ್ ಜಾರಕಿಹೊಳಿ ತಲೆ ತಗ್ಗಿಸಿ ಇರಬೇಕಾಗಿತ್ತು. ಆದರೆ ಅವರು ಸರ್ಕಾರವನ್ನು ಉರುಳಿಸುವ ಮಾತನಾಡುತ್ತಿದ್ದಾರೆ. ಸಿಎಂ ಅತ್ಯಾಚಾರ ಆರೋಪ ಹೊತ್ತಿರುವ ಜಾರಕಿಹೊಳಿಯವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸುತ್ತಿದ್ದಾರೆ. ಹೀಗಾದರೆ ಪ್ರಕರಣಕ್ಕೆ ನ್ಯಾಯ ಸಿಗಲು ಹೇಗೆ ಸಾಧ್ಯ ಎಂದು. ಹೀಗಾಗಿ ಜಾರಕಿಹೊಳಿಗೆ ಕ್ಲೀನ್ ಚಿಟ್ ಗ್ಯಾರಂಟಿ ಎಂದು ಶಿವರಾಮೇಗೌಡ ಹೇಳಿದ್ದಾರೆ.
ಪೊಲೀಸರ ತನಿಖೆ ಇದರ ಮುನ್ಸೂಚನೆಯನ್ನು ಕೊಟ್ಟಿದ್ದು, ಸರ್ಕಾರದ ಅನ್ನ ತಿನ್ನುತ್ತಿದ್ದೇವೆ ಅನ್ನುವ ಭಾವನೆ ಪೊಲೀಸರಿಗೆ ಇರುತ್ತಿದ್ರೆ ಇಷ್ಟು ಹೊತ್ತಿಗೆ ರಮೇಶ್ ಜಾರಕಿಹೊಳಿ ಬಂಧನವಾಗುತ್ತಿತ್ತು. ಆದರೆ ಈ ಕೆಲಸವಾಗಿಲ್ಲ. ಡ್ರಗ್ ಕೇಸ್ ನಲ್ಲಿ ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸವಾಯ್ತು. ಬೇಕಾದವರನ್ನು ಬಿಟ್ಟು ಬೇಡವಾದವರನ್ನು ಹಿಡಿದರು.
ಹಾಗೇ ಸಿಡಿ ಪ್ರಕರಣವೂ, ಡ್ರಗ್ಸ್ ಪ್ರಕರಣದಂತೆ ಹಳ್ಳ ಹಿಡಿಯಲಿದೆ ಎಂದು ಶಿವರಾಮೇಗೌಡ ಭವಿಷ್ಯ ನುಡಿದಿದ್ದಾರೆ.
Discussion about this post