50, 60 ಕೋಟಿ ಸಿನಿಮಾಕ್ಕೆ ಹಾಕಿದ್ರಲ್ಲ. ಅದರಲ್ಲಿ 60 ಕೋಟಿ ತಂದಿದ್ದರೆ ವೃದ್ಧಾಶ್ರಮವೋ, ಅನಾಥ ಆಶ್ರಮವೋ ಇಡೀ ಮಂಡ್ಯದ ಜನತೆಗೆ ಅನುಕೂಲ ಮಾಡಿಕೊಡಬಹುದಿತ್ತು. ನೀವು ಪ್ರಚಾರಕ್ಕೆ ಬರಬೇಕಾಗಿರಲಿಲ್ಲ. ಅದನ್ನ ಮಾಡಿದ್ದೀನಿ, ಇದನ್ನ ಮಾಡಿದ್ದೀನಿ ಅಂದಿದ್ದರೆ ವರ್ತ್ ಇರುತ್ತಿತ್ತು. ಅದನ್ನು ಬಿಟ್ಟು ಸಿನಿಮಾ ಮಾಡಿಸಿದ್ರು. ಆಮೇಲೆ ಸಿನಿಮಾದವರನ್ನು ಬೈದ್ರು. ನಾವೇನು ನೌಟಂಕಿ ಆಡ್ತಾ ಇದ್ದೀವಾ ಎಂದು ದಳಪತಿಗಳಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ.
ನಾವು ಪ್ರಚಾರ ಮಾಡಿದ್ದು ಪುಟ್ಟ ಗಾಡಿಯಲ್ಲಿ. ನಾನು ನಮ್ಮ ಹೀರೋ ಎರಡು ಆಟೋ ತಂದು ಪ್ರಚಾರ ಮಾಡಿದ್ದು. ಬೇರೆಯವರಂತೆ ಮೇಲೆ ಕೆಳಗಡೆ ಹೋಗುವ ಎಸಿ ವಾಹನದಲ್ಲಿ ನಾವು ಪ್ರಚಾರ ಮಾಡಿಲ್ಲ ಅನ್ನುವ ಮೂಲಕ ಮಂಡ್ಯ ಜನರೇ ನಿಮಗ್ಯಾರು ಬೇಕು ಅನ್ನುವುದನ್ನು ನಿರ್ಧರಿಸಿ ಅನ್ನುವ ಸಂದೇಶ ಕೊಟ್ಟರು ದರ್ಶನ್.
Discussion about this post