ಮಂಡ್ಯ : ಒಂದೇ ದಿನ ಹುಚ್ಚು ನಾಯಿಯೊಂದು 40ಕ್ಕೂ ಹೆಚ್ಚು ಮಂದಿಗೆ ಕಚ್ಚಿರುವ ಘಟನೆ ಮಂಡ್ಯ ಜಿಲ್ಲೆಯ KR ಪೇಟೆ ತಾಲೂಕಿನಲ್ಲಿ ನಡೆದಿದೆ.
ಹೊಸಹೊಳಲು ಗ್ರಾಮದಲ್ಲಿ ಐದಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ ನಂತರ ಕೆಆರ್ಪೇಟೆ ಪಟ್ಟಣ, ಪುರದ ಗೇಟ್, ಕುಂದನಗಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿ, ಮಾಕವಳ್ಳಿ ಭಾಗದಲ್ಲಿ ಸುಮಾರು 40ಕ್ಕೂ ಅಧಿಕ ಮಂದಿಗೆ ಬಾಯಿ ಹಾಕಿದೆ.
ಕಬ್ಬು ಕಟಾವು ಮಾಡುತ್ತಿದ್ದವರು, ವಾಕಿಂಗ್ ಮಾಡುತ್ತಿದ್ದವರು, ಹಾಲು ಹಾಕಲು ಹೋಗುತ್ತಿದ್ದವರು, ಕೂಲಿ ಕೆಲಸಕ್ಕೆ ತೆರಳುತ್ತಿದ್ದವರು ಹೀಗೆ ಕಂಡ ಕಂಡವರ ಮೇಲೂ ನಾಯಿ ದಾಳಿ ನಡೆಸಿದೆ. ಇದೀಗನಾಯಿ ಕಡಿತಕ್ಕೆ ಒಳಗಾದವರನ್ನು ಜನರಿಗೆ ಕೆಆರ್ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದ, ಗಂಭೀರವಾಗಿ ಗಾಯಗೊಂಡವರನ್ನು ಮೈಸೂರಿಗೆ ಕಳುಹಿಸಿಕೊಡಲಾಗಿದೆ.
Discussion about this post