ಮಂಡ್ಯ : ಈ ಕೊರೋನಾ ಮಹಾಮಾರಿ ಅನೇಕ ಮಂದಿಯ ಅಸಲಿ ಮುಖವಾಡಗಳನ್ನು ಕಳಚಿ ಹಾಕಿದೆ. ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ವರ್ತಿಸಿದ ಅನೇಕ ಮಂದಿ ಸಮಾಜದ ಮುಂದೆ ಬೆತ್ತಲಾಗಿದ್ದಾರೆ.
ಮೊನ್ನೆಯಷ್ಟೇ ತಂದೆಯ ಹಣ ಬೇಕು, ಹೆಣ ಬೇಡ ಅಂದಿದ್ದ, ಅದು ನಡೆದಿದ್ದು ಮೈಸೂರಿನಲ್ಲಿ. ಇದೀಗ ಸಾಂಸ್ಕೃತಿಕ ನಗರಿಯ ಪಕ್ಕದ ಮಂಡ್ಯದಿಂದ ಇಂತಹುದೇ ಅಮಾನವೀಯ ಕೃತ್ಯವೊಂದು ವರದಿಯಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿಯ ಸಿದ್ದಮ್ಮ ಕೊರೋನಾ ಸೋಂಕಿಗೆ ತುತ್ತಾದ ಹಿನ್ನಲೆಯಲ್ಲಿ ಮದ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಿದ್ದಮ್ಮ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದರು. ಇದರಿಂದ ಇತರೆ ರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹೀಗಾಗಿ ಸಿದ್ದಮ್ಮ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿದ ವೈದ್ಯರು, ಅಂಬ್ಯುಲೆನ್ಸ್ ನಲ್ಲಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಅಧಿಕಾರಿಗಳು ಕೂಡಾ ಆಗಮಿಸಿದ್ದರು.
ಈ ವೇಳೆ ಮನೆ ಹತ್ತಿರ ಅಂಬ್ಯುಲೆನ್ಸ್ ಬರುತ್ತಿದ್ದಂತೆ ರೊಚ್ಚಿಗೆದ್ದ ಸಿದ್ದಮ್ಮ ಅವರ ಅಳಿಯ ಮುತ್ತಯ್ಯ, ಅತ್ತೆಯನ್ನು ಮನೆಯೊಳಗೆ ಸೇರಿಸಲು ಒಪ್ಪಲೇ ಇಲ್ಲ. ಅಧಿಕಾರಿಗಳು ಅದೆಷ್ಟು ಮನವೊಲಿಸಿದರೂ ಮುತ್ತಯ್ಯ ಅತ್ತೆಯನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ ಕೊನೆಗ ಸೋತ ವೈದ್ಯರು ಸಿದ್ದಮ್ಮ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
Discussion about this post