ಈ ವ್ಹೀಲಿಂಗ್ ಮಾಡುವವರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೊಲೀಸರು ಅದೆಷ್ಟೂ ಪ್ರಯತ್ನಿಸಿದ್ರೂ ಈ ರಾಕ್ಷಸರ ಅಟ್ಟಹಾಸ ನಿಲ್ಲೋದಿಲ್ಲ. ಉಳಿದವರ ಪಾಲಿಗೆ ಯಮಕಿಂಕರರಾಗುತ್ತಿರುವ ಇವರ ಕಾಟಕ್ಕೆ ಯಾವಾಗ ಮುಕ್ತಿ
ಮಂಡ್ಯ : ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ನಾಲ್ವರು ಯುವಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಪಟ್ಟಣದಲ್ಲಿ ನಡೆದಿದೆ.
ಮೈಸೂರು – ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯ ಬೆಂಗಳೂರಿಗೆ ಹೋಗುತ್ತಿದ್ದ ಇನ್ನೋವಾ ಕಾರು ಚಾಲಕ ರಸ್ತೆ ಉಬ್ಬಿನ ಬಳಿ ಕಾರಿನ ವೇಗ ಕಡಿಮೆ ಮಾಡಿದ್ದಾರೆ. ಕಾರಿನ ಹಿಂದೆ ಕೊಲ್ಲಿ ವೃತ್ತದಿಂದ ನಿಡಘಟ್ಟದ ಕಡೆಗೆ ಎರಡು ಬೈಕ್ ಗಳಲ್ಲಿ ಬರುತ್ತಿದ್ದ ವ್ಹೀಲಿಂಗ್ ಶೂರರು ಈ ವೇಳೆ ಇನ್ನೋವಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದೆ.ತಲೆ, ಮುಖ ಮತ್ತು ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿದೆ.
ಗುದ್ದಿದ ರಭಸಕ್ಕೆ ಬೈಕ್ಗೆ ಡ್ಯಾಮೇಜ್ ಆಗಿದ್ದು, ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡವರನ್ನು ವರ್ಕ್ ಶಾಪ್ ನಲ್ಲಿ ಕೆಲಸ ಮಾಡುವ ಸೈಯದ್ ಅಸ್ಲಂ ಪುತ್ರ ಸೈಯದ್ ಶೋಹೆಬ್ (22),ಪಟ್ಟಣದ ಹೊಳೇ ಬೀದಿ ನಿವಾಸಿ ಸೈಯದ್ ಮೊಹಮದ್ ಪುತ್ರ ಸೈಯದ್ ಮಜದ್ (23) ತಾಲೂಕಿನ ಬೆಸಗರಹಳ್ಳಿ ರಿಯಾನ್ ಬೇಗ್ ಪುತ್ರ ಅಯೂಬ್ ಬೇಗ್ (23), ಬೆಳತೂರಿನ ಅಪ್ರಾಪ್ತ ವಯಸ್ಸಿನ ಯುವಕ ಎಂದು ಗುರುತಿಸಲಾಗಿದೆ.
Discussion about this post