ಪೊಲೀಸರ ಈ ಆದೇಶವನ್ನು (Male pillion riders banned) ವಿರೋಧಿಸುವ ಮಂದಿ ಈ ಸುದ್ದಿಯನ್ನು ತಪ್ಪದೇ ಓದಿ. ಹಲವು ರಾಜ್ಯಗಳು ಇಂತಹ ನಿಯಮ ತಂದು ಗೆಲವು ಸಾಧಿಸಿತ್ತು
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಅಹಿತಕರ ಘಟನೆ ಬಳಿಕ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಪೊಲೀಸರಿಗೆ ಆದ್ಯಾಕೋ ಪರಿಸ್ಥಿತಿ ಸಮಾಧಾನ ತಂದಿಲ್ಲ. ಗುಪ್ತಚರ ಇಲಾಖೆಯಿಂದಲೂ ನೆಮ್ಮದಿಯ ಸುದ್ದಿ ಬಂದಿಲ್ಲ.( Male pillion riders banned)
ಮತ್ತೊಂದು ಕಡೆ ಕೇಂದ್ರ ಸರ್ಕಾರ ದಕ್ಷಿಣ ಕನ್ನಡದ ಘಟನೆ ಬಗ್ಗೆ ಗರಂ ಆಗಿದ್ದು, ಬೊಮ್ಮಾಯಿ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಕೇಳಿದೆ. ಹೀಗಾಗಿ ಸಿಎಂ ಕೂಡಾ ಶಾಂತಿ ಕದಡದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಮೊನ್ನೆ ನಡೆದ ಸಭೆಯೊಂದರಲ್ಲಿ ಪೊಲೀಸರ ಅಧಿಕಾರಿಗಳ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದ ಮುಖ್ಯಮಂತ್ರಿಗಳು ಲೆಫ್ಟ್ ರೈಟ್ ಅಂದಿದ್ದರು. ಹೀಗಾಗಿ ಪೊಲೀಸರು ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡುವ ಕೈಗಳಿಗೆ ಕೋಳ ಬಿಗಿಯಲು (Male pillion riders banned) ಪಣ ತೊಟ್ಟಿದ್ದಾರೆ.
ಇದನ್ನು ಓದಿ : Araga jnanendra amit shah : ನಿಮಗೆ ಆಗೋದಿಲ್ಲ ಅಂದ್ರೆ ಹೇಳಿ : ಆರಗ ಜ್ಞಾನೇಂದ್ರಗೆ ಅಮಿತ್ ಶಾ ಕ್ಲಾಸ್
ಈ ಕಾರಣದಿಂದಲೇ ದಕ್ಷಿಣ ಕನ್ನಡದಲ್ಲಿ ಹೊಸ ನಿಯಮವೊಂದು ಜಾರಿಯಾಗಿದ್ದು, ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಹದಿನೆಂಟು ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಮಾತ್ರ ವಿನಾಯತಿ ನೀಡಲಾಗಿದೆ.
ಒಂದು ವಾರ ಈ ನಿಯಮ ಜಿಲ್ಲೆಯಲ್ಲಿ ಜಾರಿಯಲ್ಲಿರಲಿದ್ದು, ಬೇರೆ ರಾಜ್ಯಗಳಲ್ಲಿ ಶಾಂತಿಗೆ ಭಂಗ ಬಂದ ವೇಳೆ ಈ ನಿಯಮವನ್ನ ಜಾರಿಗೆ ತರಲಾಗಿತ್ತು ಅಂದಿದ್ದಾರೆ. ಅಲ್ಲಿ ಎಲ್ಲಾ ಹಿಂಬದಿ ಸವಾರರಿಗೆ ನಿಷೇಧ ಹೇರಲಾಗಿತ್ತು. ನಾವು ಇಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳಿಗೆ ರಿಯಾಯಿತಿ ನೀಡಿದ್ದೇವೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇನ್ನು ಅಲೋಕ್ ಕುಮಾರ್ ಕೊಟ್ಟಿರುವ ಈ ಹೇಳಿಕೆ ಅನೇಕರ ಅಚ್ಚರಿಗೆ ಕಾರಣವಾಗಿದೆ. ಎಲ್ಲೂ ಇಲ್ಲದ ನಿಯಮವನ್ನು ಇಲ್ಲಿ ಜಾರಿಗೆ ತರುತ್ತಿದ್ದಾರೆ. ಕಾರಿನಲ್ಲಿ ಬಂದವರು ಹತ್ಯೆ ಮಾಡೋದಿಲ್ವ, ಇದೊಂದು ಹುಚ್ಚು ನಿರ್ಧಾರ ಎಂದೆಲ್ಲಾ ಟೀಕಿಸುತ್ತಿದ್ದಾರೆ. ಹೀಗೆ ಟೀಕಿಸುವುದರಲ್ಲಿ ಅರ್ಥವಿಲ್ಲ. ಯಾರೋ ಒಬ್ಬ ಜ್ಯೋತಿಷಿ ಪೊಲೀಸರು ಕೂಡಾ ಡಬ್ಬಲ್ ರೈಡ್ ಹೋಗೋ ಹಾಗಿಲ್ಲ ಎಂದು ‘ಫರ್ಮಾನು’ ಹೊರಡಿಸಿದ್ದಾರೆ.
Read More : Amit shah bommai : ಬೊಮ್ಮಾಯಿ ಜೀ ಹಮಾರೆ ಪಾರ್ಟಿ ಮೆ ಕ್ಯಾ ಚಲ್ ರಹಾ ಹೈ…?
ಬೇರೆ ಬೇರೆ ಪ್ರಕರಣಗಳಲ್ಲಿ ಪೊಲೀಸರು ಎಡವಿರಬಹುದು. ಕರ್ತವ್ಯ ಲೋಪವಾಗಿರಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳು ದ್ವೇಷಪೂರಿತವಾಗಿದ್ದವು. ಹೀಗಾಗಿ ಇಂತಹ ಕಠಿಣ ಕ್ರಮಗಳು ಅನಿವಾರ್ಯ. ಕೇಳುವುದಕ್ಕೆ ಈ ಆದೇಶ ಹಾಸ್ಯಾಸ್ಪದ ಅನ್ನಿಸಬಹುದು. ಆದರೆ ಇಂತಹ ಆದೇಶವನ್ನು ಜಾರಿಗೊಳಿಸಿದ ಅನೇಕ ರಾಜ್ಯಗಳು ಶಾಂತಿ ಮರು ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು.
ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ 24 ಗಂಟೆಯ ಅವಧಿಯಲ್ಲಿ ಕೇರಳದ ಪಾಲಕ್ಕಾಡ್ ಎರಡು ಕೊಲೆಗಳು ಸಂಭವಿಸಿತ್ತು. ಈ ವೇಳೆ ಇಂತಹುದೇ ಆದೇಶವನ್ನು ಹೊರಡಿಸಲಾಗಿತ್ತು ( Male pillion riders banned in Palakkad after twin murders in 24 hours). 2021ರಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ಗುವಾಹಟಿಯಲ್ಲಿ ಪುರುಷ ಹಿಂಬದಿ ಸವಾರರ ಮೇಲೆ ನಿಷೇಧ ಹೇರಿತ್ತು.
ಕೇಂದ್ರ ಗುಪ್ತಚರ ಇಲಾಖೆ ಉಗ್ರ ದಾಳಿಯ ಎಚ್ಚರಿಕೆ ನೀಡಿದ್ದ ಹಿನ್ನಲೆಯಲ್ಲಿ 2002ರ ಅಕ್ಟೋಬರ್ ತಿಂಗಳಲ್ಲಿ ಅಹಮ್ಮದಬಾದ್ ನಲ್ಲಿ ಇಂತಹುದೇ ನಿಷೇಧ ಹೇರಲಾಗಿತ್ತು. ಅಷ್ಟೇ ಯಾಕೆ ಪಾಕಿಸ್ತಾನದ ಕರಾಚಿಯಲ್ಲಿ ಅದೆಷ್ಟು ಸಲ ಇಂತಹ ಆದೇಶ ಜಾರಿಗೆ ಬಂದಿದೆ ಅನ್ನುವುದು ಲೆಕ್ಕಕ್ಕಿಲ್ಲ.
ಹೀಗಾಗಿ ಮಂಗಳೂರಿನಲ್ಲಿ ಬಂದಿರುವುದು ವಿಶೇಷ ಆದೇಶವಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ನಾಗರಿಕರ ಜೀವ ರಕ್ಷಣೆಯ ನಿಟ್ಟಿನಲ್ಲಿ ಪೊಲೀಸರು ಇಂತಹುದೊಂದು ಆದೇಶ ಹೊರಡಿಸಿದ್ದಾರೆ. ಗೌರವಿಸುವುದು ನಮ್ಮ ಕರ್ತವ್ಯ
Discussion about this post