ಮಂಡಿನೋವಿನ ಸಲುವಾಗಿ ಒಂದಿಷ್ಟು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಅನ್ನಲಾಗಿದೆ. ಆಧರೆ ಗೃಹ ಪವೇಶ, ಮದುವೆ, ಫಿಲ್ಮಂ ಟ್ರೇಲರ್ ರಿಲೀಸ್ ಹೀಗೆ ವಿವಿಧ ಕಾರ್ಯಕ್ರಮಗಳ ಒತ್ತಡದಲ್ಲಿರುವ ಸಿಎಂ ಅವರಿಗೆ ಕಾರ್ಯದ ಒತ್ತಡವಿದೆ
ಬೆಂಗಳೂರು : ಸಚಿವ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ ಅನ್ನುವ ಈಶ್ವರಪ್ಪ ಹೇಳಿಕೆಯ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡ್ತಾರೆ ಅನ್ನುವ ವದಂತಿ ಹರಡಿದೆ. ಮುಖ್ಯಮಂತ್ರಿಗಳು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಚಿಕಿತ್ಸೆ ಸಲುವಾಗಿ ಅಮೆರಿಕಾಗೆ ತೆರಳುತ್ತಾರೆ. ಅಮೆರಿಕಾದಲ್ಲೇ ಆಪರೇಷನ್ ಮಾಡಿಕೊಳ್ತಾರೆ ಅನ್ನುವುದು ವದಂತಿ.
ಆಪರೇಷನ್ ಬಳಿಕ 2 ರಿಂದ 3 ತಿಂಗಳ ವಿಶ್ರಾಂತಿ ಬೇಕಾಗುತ್ತದೆ. ಹೀಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಅನ್ನುವುದು ರಾಜಕೀಯ ಪಡಸಾಲೆಯ ಗುಸುಗುಸು. ಆದರೆ ಈ ಸುದ್ದಿಯನ್ನು ಬೊಮ್ಮಾಯಿಯವರ ಆಪ್ತಿವಲಯ ಅಲ್ಲಗಳೆದಿದೆ. ಇವೆಲ್ಲಾ ಮಂಡಿನೋವಿನ ಕಾರಣಕ್ಕೆ ಹಿತಶತ್ರುಗಳು ಕಟ್ಟಿದ ರೆಕ್ಕೆಪುಕ್ಕ ಅಂದಿದ್ದಾರೆ.
ಬೊಮ್ಮಾಯಿಯವರಿಗೆ ಮಂಡಿನೋವು ಇರುವುದು ಹೌದು. ಅದಕ್ಕೆ ಅವರು ಚಿಕಿತ್ಸೆ ಕೂಡಾ ಪಡೆಯುತ್ತಿದ್ದಾರೆ. ಪ್ರಸ್ತುತ ಆಪರೇಷನ್ ಅಗತ್ಯವಿಲ್ಲ ಅಂತಾ ವೈದ್ಯರು ಹೇಳಿದ್ದಾರೆ. ಒಂದು ವೇಳೆ ಆಪರೇಷನ್ ಅಗತ್ಯ ಬಂದರೂ ರಾಜ್ಯದ ಆಸ್ಪತ್ರೆಯಲ್ಲೇ ದಾಖಲಾಗುತ್ತಾರೆ. ತಪ್ಪಿದ್ರೆ ದೇಶದ ಬೇರೆ ಆಸ್ಪತ್ರೆಗಳಿಗೆ ತೆರಳಬಹುದು. ಹಾಗಂತ ವಿದೇಶಕ್ಕೆ ತೆರಳುವ ಪ್ರಶ್ನೆಯೇ ಇಲ್ಲ ಅಂದಿದ್ದಾರೆ.
ಈ ನಡುವೆ ಮಂಡಿನೋವಿನ ಸಲುವಾಗಿ ಒಂದಿಷ್ಟು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಅನ್ನಲಾಗಿದೆ. ಆಧರೆ ಗೃಹ ಪವೇಶ, ಮದುವೆ, ಫಿಲ್ಮಂ ಟ್ರೇಲರ್ ರಿಲೀಸ್ ಹೀಗೆ ವಿವಿಧ ಕಾರ್ಯಕ್ರಮಗಳ ಒತ್ತಡದಲ್ಲಿರುವ ಸಿಎಂ ಅವರಿಗೆ ಕಾರ್ಯದ ಒತ್ತಡವಿದೆ. ಹೀಗಾಗಿ ಅಧಿವೇಶನದ ಬಳಿಕ ಅವರು ವಿಶ್ರಾಂತಿಗೆ ತೆರಳುವ ಸಾಧ್ಯತೆಗಳಿದೆ.
Discussion about this post