ನವದೆಹಲಿ : LPG ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ಕೇಂದ್ರ ಸರ್ಕಾರ ಯೋಚಿಸಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ, ಪೆಟ್ರೋಲಿಯಂ ಸಚಿವಾಲಯವಾಗ್ಲಿ ಅಥವಾ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈಗಿರುವ ಮಾಹಿತಿಗಳ ಪ್ರಕಾರ ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಾಧ್ಯತೆಯಿದ್ದು, ಗ್ರಾಹಕರು ಪ್ರತಿ ಸಿಲಿಂಡರ್‌ಗೆ 1,000 ರೂಪಾಯಿ ಪಾವತಿಸಬೇಕಾಗುತ್ತದೆ ಅನ್ನಲಾಗಿದೆ.
ಈ ಹಿಂದೆ ಸಬ್ಸಿಡಿ ದರದಲ್ಲಿ LPG ಸಿಲಿಂಡರ್ ಗಳನ್ನು ವಿತರಿಸಲಾಗುತ್ತಿತ್ತು. ಬಳಿಕ ಸಬ್ಸಿಡಿ ದರವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ಕೆಲಸ ಪ್ರಾರಂಭವಾಯ್ತು. ಕೆಲವೇ ತಿಂಗಳಲ್ಲಿ ಸಬ್ಸಿಡಿ ಬ್ಯಾಂಕ್ ಖಾತೆ ಬರುವುದೇ ನಿಂತು ಹೋಯ್ತು. ಇದೇ ಪ್ರಕ್ರಿಯೆ ಮುಂದುವರಿಯಲಿದೆ ಎನ್ನಲಾಗಿದ್ದು, ಈ ಮೂಲಕ ಸಬ್ಸಿಡಿ ಕಾನ್ಸೆಪ್ಟ್ ಸಂಪೂರ್ಣ ರದ್ದಾಗುವ ಸಾಧ್ಯತೆಗಳಿದೆ.
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಪಾಲಿಸಿಯೊಂದನ್ನು ರಚಿಸುತ್ತಿದೆ. ಪಾಲಿಸಿ ಪ್ರಕಾರ ಸರ್ವರಿಗೂ ಸಬ್ಸಿಡಿ ಕಾನ್ಸೆಪ್ಟ್ ರದ್ದಾಗಲಿದ್ದು, 10 ಲಕ್ಷಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರಿಗೆ ಮಾತ್ರ ಸಬ್ಸಿಡಿ ದೊರೆಯಲಿದೆ. ಜೊತೆಗೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಮುಂದುವರಿಯಲಿದೆ ಅನ್ನಲಾಗಿದೆ.
Discussion about this post