ಕೊರೋನಾ ತವರೂರು ಚೀನಾದಲ್ಲಿ ಮಾನವಸಂಕುಲ ನಾಶ ಮಾಡಬಲ್ಲ ಅದೆಷ್ಟು ವೈರಸ್ ಆಡಗಿದೆಯೋ ಗೊತ್ತಿಲ್ಲ ( Langya Henipavirus)
ಜಗತ್ತಿಗೆಲ್ಲಾ ಕೊರೋನಾ ಹರಡಿದ ಚೀನಾ ತನ್ನ ಮಡಿಲಲ್ಲಿ ವಿನಾಶಕಾರಿ ವೈರಸ್ ಗಳಲ್ಲಿ ಇಟ್ಟುಕೊಂಡಂತೆ ಕಾಣಿಸುತ್ತಿದೆ. ಪುರಾಣದಲ್ಲಿ ಬರುವ ಭಸ್ಮಾಸುರನಂತೆ ಚೀನಾ ಕಲಿಯುಗದ ಭಸ್ಮಾಸುರನಾಗುತ್ತದೆಯೇ ಅನ್ನುವ ಆತಂಕ ಕಾಡುತ್ತಿದೆ.( Langya Henipavirus)
ಹಲವು ವೈರಸ್ ಗಳ ತವರು ಮನೆಯಾಗಿರು ಚೀನಾದಲ್ಲಿ ಇದೀಗ ಪ್ರಾಣಿಗಳ ಮುಖಾಂತರ ಹರಡುವ ಮತ್ತೊಂದು ಮಾದರಿಯ ಹೆನಿಪಾವೈರಸ್ ಪತ್ತೆಯಾಗಿದೆ. ಚೀನಾದ ಶಾಂಡಾಂಗ್ ಮತ್ತು ಹೆನನ್ ಪ್ರಾಂತ್ಯದಲ್ಲಿ 35 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಇದನ್ನು ಓದಿ : mysore dasara 2022 : ಅರಮನೆಗೆ ಗಜಪಡೆ : ಮೈಸೂರು ದಸರಾಗೆ ಭರ್ಜರಿ ಸಿದ್ದತೆ
ಹೆನಿಪಾವೈರಸ್ ಅಥವಾ ಎಲ್ಎವೈವಿ (ಲಾಂಗ್ಯಾ ಹೆನಿಪಾವೈರಸ್) ಎಂದು ಕರೆಯಲ್ಪಡುವ ಈ ಹೊಸ ವಿಧದ ವೈರಸ್ ಪ್ರಾಣಿಗಳಲ್ಲಿ ಅಭಿವೃದ್ಧಿಗೊಂಡು ಬಳಿಕ ಮನುಷ್ಯನಿಗೆ ಹರಡುತ್ತದೆ. ಜ್ವರ, ನಿಶ್ಯಕ್ತಿ, ಕೆಮ್ಮು, ಉಬ್ಬಳಿಕೆ, ಸ್ನಾಯು ಸೆಳೆತ, ಹಸಿವಿಲ್ಲದಿರುವುದು ಈ ರೋಗದ ಲಕ್ಷಣವಾಗಿದೆ.
ಈ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆಯಾಗಲೀ, ಲಸಿಕೆಯಾಗಲೀ ಇಲ್ಲ. ಸೋಂಕಿನ ಕಾರಣದಿಂದ ಯಾವುದೇ ಮರಣ ಸಂಭವಿಸಿಲ್ಲ ಅನ್ನುವುದಷ್ಟೇ ನೆಮ್ಮದಿಯ ವಿಷಯ.
Discussion about this post