ಕನ್ನಡ ಕಿರುತೆರೆ ಲೋಕದಲ್ಲಿ ಇದೀಗ ಹೊಸ ಕಥೆಯ ಅಲೆ ಬೀಸಲಾರಂಭಿಸಿದೆ. ಅತ್ತೆ ಸೊಸೆ ಜಗಳದ ಕಥೆಗಳು ಬೋರ್ ಹೊಡೆಸಿದ ಕಾರಣದಿಂದ ಹೊಸಬರು ಹೊಸ ಕಥೆಗಳ ಮೂಲಕ ಕಿರುತೆರೆ ಲೋಕದಲ್ಲಿ ಬೇರೂರಲu aaರಂಭಿಸಿದ್ದಾರೆ. ಈ ಪೈಕಿ ಜನರಿಗೆ ಇಷ್ಟವಾದ ಧಾರವಾಹಿಗಳಲ್ಲಿ ಲಕ್ಷಣ ಕೂಡಾ ಒಂದು.
ಭಿನ್ನ ಕಥೆಯ ಮೂಲಕ ಮೂಡಿ ಬರುತ್ತಿರುವ ಧಾರವಾಹಿ ಎಲ್ಲಾ ವರ್ಗಗಳನ್ನೂ ತಲುಪುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲದೆ ಕಥೆಯ ಪಾತ್ರಗಳಿಗೆ ಜೀವ ತುಂಬುವಲ್ಲಿ ಎಲ್ಲಾ ಕಲಾವಿದರು ಸಫಲರಾಗಿದ್ದಾರೆ. ಅದರಲ್ಲೂ ಲಕ್ಷಣಳ ಅಜ್ಜಿಯ ಪಾತ್ರಕ್ಕೆ ಜೀವ ತುಂಬಿರುವ ಉಮಾ ದೀಕ್ಷಿತ್ ಢಿಪರೆಂಟ್ ಕ್ಯಾರೆಕ್ಟರ್.
ವಯಸ್ಸು 60 ಕಳೆದ ಪಾತ್ರಕ್ಕೆ ಜೀವ ತುಂಬಿರುವ ಉಮಾ ದೀಕ್ಷಿತ್ ನಿಜ ಜೀವನದಲ್ಲಿ young and energetic lady. BA LLB ಓದಿರುವ ಉಮಾ ದೀಕ್ಷಿತ್ ಹೈಕೋರ್ಟ್ ಲಾಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಗಂಡ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಮಗ ಐಐಟಿಯಲ್ಲಿ ಟೆಕ್ ಓದುತ್ತಿದ್ದಾನೆ. ಮಗಳು ಪತಿಕ್ರೋದ್ಯಮ ಹಾಗೂ ಸೈಕೋಲಾಜಿ ಪದವಿಯ ಕೊನೆಯ ವರ್ಷದಲ್ಲಿದ್ದಾಳೆ.
13ನೇ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ನಾಟಕಗಳ ಮೂಲಕ ಕಲೆಯನ್ನು ಕರಗತ ಮಾಡಿಕೊಂಡರು. ಇದಾದ ಬಳಿಕ ಚಂದನವನಕ್ಕೆ ಕಾಲಿಟ್ಟ ಉಮಾ 13 ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅನೇಕ ಧಾರವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಅಂದ ಹಾಗೇ ಲಕ್ಷಣ ಇವರ 160ನೇ ಪ್ರಾಜೆಕ್ಟ್.
ಇನ್ನು ಲಕ್ಷಣ ಧಾರವಾಹಿಯಲ್ಲಿ ಹಣ್ಣು ಹಣ್ಣು ಮುದುಕಿಯ ಪಾತ್ರದ ಆಫರ್ ಬಂದಾಗ ಉಮಾ ದೀಕ್ಷಿತ್ ಗಾಬರಿಯಾಗಿದ್ದರು. ವಯಸ್ಸಿಗೆ ಮೀರಿದ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ ಮುಂದೆ ಅದೇ ರೀತಿಯ ಪಾತ್ರಗಳ ಆಫರ್ ಬಂದ್ರೆ ಕಥೆಯೇನು ಅನ್ನುವುದು ಅವರ ಆತಂಕವಾಗಿದ್ದು.
ಆದರೆ ಅಷ್ಟು ಹೊತ್ತಿಗಾಗಲೇ ಸಂಸಾರದ ಕಾರಣಕ್ಕೆ ಬಣ್ಣದ ಲೋಕಕ್ಕೆ ಬ್ರೇಕ್ ಕೊಟ್ಟು 10 ವರ್ಷಗಳಾಗಿತ್ತು. ಮಕ್ಕಳ ಎಜುಕೇಷನ್ ಒಂದು ಹಂತಕ್ಕೆ ಬಂದ ಕಾರಣ ಮತ್ತೆ ಬಣ್ಣದ ಲೋಕ ಉಮಾ ಅವರನ್ನು ಸೆಳೆದಿತ್ತು. avarigu ಪ್ರಾಜೆಕ್ಟ್ ಒಂದರ ಅವಶ್ಯಕತೆಯಿತ್ತು. ಹೀಗಾಗಿ ಅಳುಕಿನಿಂದಲೇ ಅಜ್ಜಿ ಪಾತ್ರಕ್ಕೆ ಉಮಾ ಯಸ್ ಅಂದಿದ್ದಾರೆ.
ಇನ್ನು ಅಜ್ಜಿಯ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.
Discussion about this post