ಭುವನೇಶ್ವರ : ದೃಶ್ಯಂ ಸಿನಿಮಾದ ಕಥೆಯ ಮಾದರಿಯಲ್ಲೇ ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಪ್ರಯತ್ನವನ್ನು ಕಾಳಹಂಡಿ ಪೊಲೀಸರು ವಿಫಲಗೊಳಿಸಿದ್ದಾರೆ. ಈ ಮೂಲಕ ಕಳೆದ 11 ದಿನಗಳಿಂದ ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬರ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ.
ಭುವನೇಶ್ವರದ ಕಾಳಹಂಡಿ ಜಿಲ್ಲೆಯ ಮಹಾಲಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸನ್ ಸೈನ್ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಕಿ ಮಮಿತಾ ಮಿಹರ್ ( Mamita Mehet ) ಕಳೆದ 11 ದಿನಗಳಿಂದ ನಾಪತ್ತೆಯಾಗಿದ್ದರು,
ಈ ಸಂಬಂಧ ಶಿಕ್ಷಕಿಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು, ಆದರೆ ಪೊಲೀಸರಿಗೆ ಶಿಕ್ಷಕಿಯ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. 8 ತಂಡಗಳನ್ನು ರಚಿಸಿ ತನಿಖೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಇನ್ನೇನು ಪ್ರಕರಣಕ್ಕೆ ಎಳ್ಳು ನೀರು ಬಿಡುವುದೇ ವಾಸಿ ಅನ್ನುವ ಹೊತ್ತಿಗೆ ಶಾಲೆಯ ಸ್ಟೇಡಿಯಂ ನಲ್ಲೇ ಶಿಕ್ಷಕಿ ಶವ ಇದೆ ಅನ್ನುವ ಚಿಕ್ಕ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ತಕ್ಷಣ ಈ ನಿಟ್ಟಿನಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ಶಾಲೆಯ ಸ್ಟೇಡಿಯಂ ಗೋಡೆಗೆ ತಾಗಿಕೊಂಡಿರುವ ಕೊಳಚಗೇರಿ ಪ್ರದೇಶದ ಜನರನ್ನು ಮಾತನಾಡಿಸಿದ್ದಾರೆ. ಈ ವೇಳೆ ಅಕ್ಟೋಬರ್ 8 ರ ರಾತ್ರಿ ಸ್ಟೇಡಿಯಂ ಒಳಗಡೆಯಿಂದ ಬೆಂಕಿಯ ಕೆನ್ನಾಲೆಗೆ ಕಾಣಿಸಿತ್ತು. ಈ ಹಿಂದೆ ಬೆಂಕಿ ನೋಡಿರಲಿಲ್ಲ ಅಂದಿದ್ದಾರೆ.
ಹೀಗಾಗಿ ಕ್ರಮ ಕೈಗೊಂಡ ಪೊಲೀಸರು ಅಕ್ಟೋಬರ್ 18 ರಂದು ಇಡೀ ಸ್ಟೇಡಿಯಂ ಅನ್ನು ತಮ್ಮ ವಶಕ್ಕೆ ಪಡೆದು ಅಗತ್ಯ ಬಂದೋಬಸ್ತ್ ಕೈಗೊಂಡಿದ್ದರು. ಸೋಮವಾರ ರಾತ್ರಿ ಸ್ಟೇಡಿಯಂಗೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರವಣ ವಿವೇಕ್ ಎಂ ( Kalahandi SP Saravana Vivek M ) ಪರಿಶೀಲನೆ ನಡೆಸಿದ್ದರು. ಜೊತೆಗೆ JCB ತರಿಸಿ ಸ್ಟೇಡಿಯಂ ಅಗೆಯುವ ಕಾರ್ಯವನ್ನು ಪ್ರಾರಂಭಿಸಲು ಹಸಿರು ನಿಶಾನೆ ತೋರಿದ್ದರು.
ಅದರಂತೆ ಮಂಗಳವಾರ ಬೆಳಗ್ಗೆ ವಿಸ್ತಾರ ಪ್ರದೇಶದಲ್ಲಿ ಹರಡಿಕೊಂಡಿರುವ ಸ್ಟೇಡಿಯಂನಲ್ಲಿ ಶೋಧ ಕಾರ್ಯಪ್ರಾರಂಭಿಸಲಾಗಿತ್ತು ಈ ವೇಳೆ ಸ್ಟೇಡಿಯಂನ ಒಂದು ಕಡೆ ಮರದ ಕಟ್ಟಿಗೆ ಹಾಗೂ ನಾಪತ್ತೆಯಾದ ಶಿಕ್ಷಕಿಯ ವಸ್ತುಗಳು ಪತ್ತೆಯಾಗಿತ್ತು. ಅಲ್ಲಿಗೆ ಶಿಕ್ಷಕಿಯ ಶವ ಇಲ್ಲೇ ಇದೆ ಅನ್ನುವುದು ಪಕ್ಕಾ ಆಗಿತ್ತು. ಆ ನಂತರ ಸಂಶಯಾಸ್ಪದ ಜಾಗದಲ್ಲಿ ಅಗೆದಾಗ ಸುಟ್ಟು ಹಾಕಿದ ಶವದ ಅವಶೇಷಗಳು ಪತ್ತೆಯಾಗಿದೆ.
ಈ ನಡುವೆ ಶಾಲೆಯ ಮುಖ್ಯಸ್ಥ ಗೋಬಿಂದ ಸಾಹು ಎಂಬಾತನನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವ ಸಾಹುವಿಗಾಗಿ ಇದೀಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಾಹು ಶಾಲೆಯಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ, ಇದನ್ನು ವಿರೋಧಿಸಿದ ಕಾರಣಕ್ಕೆ ಕೊಲೆಯಾಗಿದೆ ಎಂದು ಮೃತ ಶಿಕ್ಷಕಿಯ ಸಹೋದರ ಆರೋಪಿಸಿದ್ದಾರೆ.
A Police team searching for clues on the whereabouts of the missing lady teacher of Sunshine School in Mahaling under Kalahandi district have found a decomposed body from an under-construction stadium near the school on Tuesday
Discussion about this post