ಮದುವೆಯಾದ ಬಳಿಕ ನೆಟ್ಟಗೆ ಸಂಸಾರ ಮಾಡೋದು ಬಿಟ್ಟು ಬೇಲಿ ಹಾರಲು ಹೋದ ಕರ್ಮಕ್ಕೆ ಇದೀಗ ವ್ಯಕ್ತಿಯೊಬ್ಬ ಪರಪ್ಪನ ಅಗ್ರಹಾರದಲ್ಲಿ ( kumaraswamy layout ) ಮುದ್ದೆ ಮುರಿಯುತ್ತಿದ್ದಾನೆ
ಬೆಂಗಳೂರು : ಕುಮಾರಸ್ವಾಮಿ ಲೇ ಜೌಟ್ನ ( kumaraswamy layout ) ರಾಜೇಶ್ವರಿ ಅನ್ನುವವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ರಾಜೇಶ್ ಯಾಲಕ್ಕಿ ಮನೆಯವರ ವಿಶ್ವಾಸಕ್ಕೆ ಪಾತ್ರನಾಗಿದ್ದ. ಕಳೆದ 8 ವರ್ಷಗಳಿಂದ ಒಂದೇ ಮನೆಯಲ್ಲಿದ್ದ ಇದ್ದ ಮನೆ ಸದಸ್ಯನಾಗಿಯೇ ಹೋಗಿದ್ದ.
ಆಗ್ಲೇ ಮದುವೆಯಾಗಿದ್ದ ಈ ಅಂಕಲ್ ಅಮೂಲ್ಯ ಅನ್ನುವ ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದ. ಹೇಗಾದರೂ ಸರಿ ಅಮೂಲ್ಯಳನ್ನು ಪಡೆಯಲೇಬೇಕು ಅನ್ನುವ ಹಠಕ್ಕೆ ಬಿದ್ದ ರಾಜೇಶ್ ಅದಕ್ಕೆ ಏನು ಬೇಕಾದರೂ ಮಾಡಲು ಸಿದ್ದನಾಗಿದ್ದ.
ಈ ನಡುವೆ ಅಮೂಲ್ಯಳನ್ನು ಪ್ರೀತಿಸುತ್ತಿರುವ ವಿಚಾರವನ್ನು ಸ್ವೇಹಿತರಾದ ಪರಮೇಶ್ವರ್ ಹಾಗೂ ಮೇಘನಾ ಬಳಿ ಹೇಳಿಕೊಂಡಿದ್ದ. ರಾಜೇಶನ ವೀಕ್ನೆಸ್ ಅರ್ಥಮಾಡಿಕೊಂಡ ಅವರು, ನಿನಗೆ ಅಮೂಲ್ಯ ಬೇಕು ತಾನೇ. ನಾವೇ ಮದುವೆ ಮಾಡಿಸುತ್ತೇವೆ. ಅದಕ್ಕಾಗಿ ಮನೆ ಮಾಲೀಕರ ಒಡವೆ ತಂದುಕೊಡು ಸಾಕು ಅಂದಿದ್ದರು.
ಇದನ್ನೂ ಓದಿ : Rohit sharma : ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ : ಚೆಂಡು ತಗುಲಿ ಗಾಯಗೊಂಡ ಬಾಲಕಿ
ಅಷ್ಟು ವರ್ಷ ಅನ್ನ ಹಾಕಿದ ಪ್ರೀತಿಯನ್ನು ಮರೆತ ರಾಜೇಶ, ಮನೆ ಮಾಲೀಕರು ಇಲ್ಲದ ಸಂದರ್ಭದಲ್ಲಿ ಚಿನ್ನಾಭರಣಗಳನ್ನು ಒಂದೋದಾಗಿ ಎಗರಿಸಿದ್ದಾನೆ. ಕೆಲ ದಿನಗಳ ಹಿಂದೆ ಸಂಬಂಧಿಕರ ಕಾರ್ಯಕ್ರಮಕ್ಕೆ ಹೋಗಲು ಚಿನ್ನದ ಬಾಕ್ಸ್ ತೆರೆದ್ರೆ ಕಳ್ಳತನ ಬೆಳಕಿಗೆ ಬಂದಿದೆ.
ಅನುಮಾನಗೊಂಡು ರಾಜೇಶನನ್ನು ವಿಚಾರಿಸಿದ್ರೆ ಆರೋಪಿಯ ಅಸಲಿ ಮುಖ ಬಯಲಾಗಿದೆ. ಇದೇ ಕೃತ್ಯದಲ್ಲಿ ಅಮೂಲ್ಯ ಕೂಡಾ ಪಾಲುದಾರಳಾಗಿದ್ದು ಅವಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶೃತಿ ಜೊತೆ ನಟಿಸಿದ್ದ ನಟನ ಮೇಲೆ ಗುಂಡಿನ ದಾಳಿ : ಅಪಾಯದಿಂದ ಪಾರಾದ ಶಿವರಂಜನ್
ಅಮೃತ ಸಿಂಧು ಅನ್ನುವ ಸಿನಿಮಾ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಬಳಿಕ ಉದ್ಯಮಿಯಾಗಿ ಇವರು ಗುರುತಿಸಿಕೊಂಡಿದ್ದರು.
ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಹಿರಿಯ ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಪವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಹಳೆಯ ಹನುಮಂತ ದೇವಸ್ಥಾನ ಬಳಿ ಇರುವ ಅವರ ಮನೆ ಎದುರು ಈ ಘಟನೆ ನಡೆದಿದೆ. ಬೈಕ್ನಲ್ಲಿ ಬಂದ ಆರೋಪಿ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಆದರೆ ಗುರಿ ತಪ್ಪಿದ್ದರಿಂದ ಕೂದಲೆಳೆ ಅಂತರದಿಂದ ಶಿವರಂಜನ್ ಪಾರಾಗಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಆರೋಪಿಯ ಬಂಧನಕ್ಕೆ 5 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಪ್ರಾರಂಭವಾಗಿದೆ.
ಶಿವರಂಜನ್ ಅಮೃತಸಿಂಧು, ರಾಜಾರಾಣಿ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದರು. ಅಮೃತಸಿಂಧು ಶಿವರಂಜನ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.. 20 ವರ್ಷಗಳ ಹಿಂದೆ ಈ ಚಿತ್ರವನ್ನು ಶಿವರಂಜನ್ ಅವರ ತಂದೆಯೇ ನಿರ್ಮಾಣ ಮಾಡಿದ್ದರು.
ಇದೀಗ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಶಿವರಂಜನ್ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಆಸ್ತಿ ವಿಚಾರದಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಲು ತಿಳಿಸಿವೆ.
Discussion about this post