ಉಡುಪಿ : ಕರ್ನಾಟಕದ ಪೊಲೀಸ್ ವ್ಯವಸ್ಥಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಅದರಲ್ಲೂ ಇನ್ಸ್ ಪೆಕ್ಟರ್ ಮತ್ತು ಕೆಳಹಂತದ ಸಿಬ್ಬಂದಿಗೆ ಜನ ಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅನ್ನುವುದನ್ನು ವಿವರಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳು ಮಾನವೀಯತೆ ಮರೆಯುತ್ತಿರುವ ಕಾರಣ ಈ ತರಬೇತಿಯ ಅಗತ್ಯವಿದೆ. ಇದಕ್ಕೆಲ್ಲಾ ಕಾರಣ ಉಡುಪಿಯಲ್ಲಿ ಕೊರಗ ಸಮುದಾಯದ ಮೇಲೆ ನಡೆದ ದೌರ್ಜನ್ಯ. ದುರಂತ ಅಂದ್ರೆ ಈ ಘಟನೆ ನಡೆದಿರುವುದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ತವರೂರಿನಲ್ಲಿ.
ಕುಂದಾಪುರ ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಗ ಕಾಲನಿಯ ರಾಜೇಶ್ ಅನ್ನುವವರ ವಿವಾಹ ಡಿಸೆಂಬರ್ 29ಕ್ಕೆ ನಿಗದಿಯಾಗಿತ್ತು. ಈ ಸಂಬಂಧ ಸೋಮವಾರ ವರನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರ ರಾತ್ರಿಯ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ವ್ಯವಸ್ಥೆಯೊಂದಿಗೆ ಊಟವನ್ನೂ ಆಯೋಜಿಸಲಾಗಿತ್ತು. ಇಡೀ ಮದುವೆ ಮನೆ ಸಂಭ್ರಮದಲ್ಲಿ ಮುಳುಗಿದ್ರೆ. 10 ಗಂಟೆಯ ಹೊತ್ತಿಗೆ ಯಮಕಂಕಿರಂತೆ ಆಗಮಿಸಿದ್ದು ಕೋಟ ಪೊಲೀಸರು.
ಪಿಎಸ್ಐ ಸಂತೋಷ್ ಸೇರಿ ಬಂದ ಹಲ ಸಿಬ್ಬಂದಿ ಡಿಜೆ ತೆಗೆಯುವಂತೆ ಸೂಚಿಸಿದ್ದಾರೆ. ಹಾಗೇ ಹೇಳಿ ಹೋಗಿದ್ರೆ ಪರವಾಗಿರಲಿಲ್ಲ, ಬದಲಾಗಿ ಮೆಹಂದಿ ಮನೆಯಲ್ಲಿ ಸೇರಿದ್ದವರ ಮೇಲೆ ಲಾಠಿ ಬೀಸಿದ್ದಾರೆ. ಮಕ್ಕಳು ಮಹಿಳೆಯರು ಅನ್ನುವುದನ್ನು ಗಮನಿಸಿದೆ ಲಾಠಿಯೇಟು ಕೊಟ್ಟಿದ್ದಾರೆ. ಇನ್ನು ಘಟನೆ ಮೊಬೈಲ್ ಚಿತ್ರೀಕರಣ ಮಾಡುತ್ತಿದ್ದವರಿಗೂ ಲಾಠಿ ಬೀಸಿ ಮೊಬೈಲ್ ಕಸಿದು ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಈ ವೇಳೆ ಸಹಜವಾಗಿಯೇ ಪೊಲೀಸರ ಮೇಲೆ ಆಕ್ರೋಶ ವ್ಯಕ್ತವಾಗಿದೆ.( ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಿಎಂ ಬೊಮ್ಮಾಯಿಯವರೇ ಹೇಳಿಲ್ಲವೇ )

ಅಷ್ಟಕ್ಕೆ ಪೊಲೀಸರ ಅಟ್ಟಹಾಸ ನಿಲ್ಲಲಿಲ್ಲ, ಮದುವೆ ಮನೆಯಲ್ಲಿದ್ದ ಮೂವರನ್ನು ಜೀಪಿನಲ್ಲಿ ಕೂರಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ಬಟ್ಟೆ ಬಿಚ್ಚಿಸಿ ಮತ್ತೆ ಹಲ್ಲೆ ಮಾಡಿದ್ದಾರೆ.
ಡಿಜೆ ಸೌಂಡ್ ಹೆಚ್ಚಾಗಿದೆ ಅಂದ್ರೆ ಹಲ್ಲೆ ನಡೆಸು ಅಧಿಕಾರ ಕಟ್ಟವರು ಯಾರು ಅನ್ನುವುದೇ ಈಗಿರುವ ಪ್ರಶ್ನೆ. ಹೋಗ್ಲಿ ಕೊರಗರು ಬಡವರು ಅನ್ನುವ ಕಾರಣಕ್ಕೆ ದೌರ್ಜನ್ಯ ನಡೆಸಲಾಗಿದೆ. ಇದೇ ಡಿಜೆ ಸದ್ದು ಕೋಟ ಶ್ರೀನಿವಾಸ ಪೂಜಾರಿ ಮನೆಯಲ್ಲೋ, ಪ್ರಮೋದ್ ಮಧ್ವರಾಜ್ ಮನೆಯಲ್ಲೋ ಕೇಳಿ ಬಂದ್ರೆ ಪೊಲೀಸರು ಹೀಗೆ ಲಾಠಿ ಬೀಸುವ ಎದೆಗಾರಿಕೆ ತೋರಿಸುತ್ತಿದ್ರ ಅನ್ನುವುದು ಪ್ರಜ್ಞಾವಂತರ ಮಾತು.
ಘಟನೆಯ ಬಳಿಕ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವ್ಯವಸ್ಥೆಯ ಬಗ್ಗೆ ಖೇದ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದಾರೆ. ಸಚಿವ ಶ್ರೀನಿವಾಸ ಪೂಜಾರಿ ಇಂದು ಕೊರಗ ಕೇರಿಗೆ ಭೇಟಿ ನೀಡಲಿದ್ದು, ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ.
ಇನ್ನು ಉಡುಪಿ ಎಸ್ಪಿ ಎನ್ ವಿಷ್ಣುವರ್ಧನ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸರ ಮೇಲೆ ನಂಬಿಕೆ ಇರಲಿ ಅಂದಿದ್ದಾರೆ. ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇನೆ ಅಂದಿದ್ದಾರೆ.
ದೌರ್ಜನ್ಯ ಎಸಗಿದ ಪೊಲೀಸರಿಗೆ ಶಿಕ್ಷೆ ಅಂದ್ರೆ ಏನಾಗಬಹುದು, ನಾಲ್ಕೈದು ತಿಂಗಳು ಅಮಾನತುಗೊಂಡು ಮತ್ತೆ ಕೆಲಸಕ್ಕೆ ಮರಳುತ್ತಾರೆ. ಅವರೇನೂ ಶಾಶ್ವತವಾಗಿ ಮನೆಗೆ ಹೋಗೋದಿಲ್ಲ. ಒಂದೆರೆಡು ದಿನ ಜೈಲಿಗೂ ಹೋಗೋದಿಲ್ಲ ಅಂತಾರೆ ಈ ಹಿಂದೆ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು.
Discussion about this post