ತಮಿಳುನಾಡು ಮೂಲದ ಖೋ..ಖೋ ( kho kho league ) ಹಲವಾರು ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೆ ಹಳೆಯ ವೈಭವಕ್ಕೆ ಮರಳಿತ್ತು. ಆದರೆ ಅಧುನಿಕ ಕಾಲ ಘಟ್ಟದಲ್ಲಿ ಖೋಖೋ ಶಾಲಾ ಮೈದಾನದಿಂದ ಮರೆಯಾಗಿತ್ತು.
ನವದೆಹಲಿ : ಕ್ರಿಕೆಟ್ ಆಯ್ತು, ಕಬಡ್ಡಿ ಆಯ್ತು, ಪುಟ್ಭಾಲ್ ಆಯ್ತು ಈಗ ಖೋ ಖೋ ಸರದಿ. ( kho kho league ) ಹೌದು ಈ ಮಣ್ಣಿನ ಕ್ರೀಡೆ ಮತ್ತೆ ವೈಭವಕ್ಕೆ ಮರಳುವ ದಿನಗಳು ಬಂದಿದೆ. ಕ್ರಿಕೆಟ್, ಕಬಡ್ಡಿ ರೀತಿಯಲ್ಲೇ ಖೋ ಖೋ kho kho league ಆಟಕ್ಕೂ ಲೀಗ್ ಪ್ರಾರಂಭಗೊಳ್ಳಲಿದೆ.
ಮೊದಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್ ( ultimate kho kho league ) ಆಗಸ್ಟ್ 14 ರಂದು ಪ್ರಾರಂಭಗೊಳ್ಳಲಿದೆ. ಪುಣೆಯ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಚೊಚ್ಚಲ ಆವೃತ್ತಿಗೆ ಚಾಲನೆ ಸಿಗಲಿದೆ. ಡಾಬರ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಅಮಿತ್ ಬರ್ಮನ್ ಅವರು ಭಾರತೀಯ ಖೋ ಖೋ ಫೆಡರೇಶನ್ ಸಹಯೋಗದೊಂದಿಗೆ ಈ ಲೀಗ್ ಅನ್ನು ಆರಂಭಿಸುತ್ತಿದ್ದಾರೆ. ಒಟ್ಟು 6 ತಂಡಗಳು ಈ ಬಾರಿ ಪಾಲು ಪಡೆಯಲಿದ್ದು, ಫ್ರಾಂಟೈಸಿ ಆಧಾರದಲ್ಲಿ ಲೀಗ್ ಪಂದ್ಯಗಳು ನಡೆಯಲಿದೆ.
ಇದನ್ನೂ ಓದಿ : kerala lottery : ಮೊದಲ ಬಹುಮಾನ 25 ಕೋಟಿ ರೂಪಾಯಿ : ಕಮ್ಯುನಿಸ್ಟ್ ಸರ್ಕಾರದಿಂದ ಲಾಟರಿ ಪ್ರಿಯರಿಗೆ ಬಂಪರ್
ಯಾವುದು 6 ತಂಡಗಳು
ಕೆಎಲ್ಓ ಸ್ಫೋಟ್ಸ್ ಒಡೆತನದ ಚೆನೈ ಕ್ವಿಕ್ ಗನ್ಸ್ , ಅದಾನಿ ಸ್ಫೋರ್ಟ್ ಲೈನ್ ಒಡೆತನದ ಗುಜರಾತ್ ಜೈಂಟ್ಸ್ , ಬಾದ್ ಶಾ ಹಾಗೂ ಪುನೀತ್ ಬಾಲನ್ ಒಡೆತನದ ಮುಂಬೈ ಕಿಲಾಡೀಸ್, ಓಡಿಶಾ ಸರ್ಕಾರದ ಒಡಿಶಾ ಜಗ್ಗರ್ ನಟ್ಸ್, ಕ್ಯಾಪ್ಕಿ ಗ್ಲೋಬಲ್ ಮಾಲೀಕತ್ವದ ರಾಜಸ್ಥಾನ ವಾರಿಯರ್ಸ್ ಮತ್ತು ಜಿಎಂಆರ್ ಸ್ಫೋರ್ಟ್ಸ್ ಒಡೆತನದ ತೆಲುಗು ಯೋಧಾಸ್ ತಂಡಗಳು ಈ ಕೂಟದಲ್ಲಿ ಪಾಲು ಪಡೆಯಲಿದೆ.
ಚೊಚ್ಚಲ ಪಂದ್ಯದಲ್ಲಿ ಭಾರತದ ಆಟಗಾರರ ಜೊತೆಗೆ ವಿದೇಶಿ ಆಟಗಾರರು ಕೂಡಾ ಇರಲಿದ್ದಾರೆ. ಇಂದು ಆಟಗಾರರ ಆಯ್ಕೆ ನಡೆಯಲಿದ್ದು, ಇಂಗ್ಲೆಂಡ್, ಇರಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಬಾಂಗ್ಲಾ ಮತ್ತು ನೇಪಾಳದ ಆಟಗಾರರು ವಿವಿಧ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.
The tournament will be broadcasted on Sony Sports Network. Ultimate Kho Kho will be aired LIVE in Hindi (SonyTEN 3), English (SonyTEN 1), Tamil, and Telugu (SonyTEN 4).
ಬೈಕ್ ಮೇಲೆ ಎಗರಿದ ಚಿರತೆ : ಹಾರ್ನ್ ಮಾಡಿ ಚಿರತೆ ಓಡಿಸಿದ ಸುಬ್ರಹ್ಮಣ್ಯ ನಾವುಡ
ನಿಜಕ್ಕೂ ಇವರನ್ನು ಮೆಚ್ಚಲೇಬೇಕು. ಕ್ಷಣದಲ್ಲಿ ತೋರಿದ ಬುದ್ದಿವಂತಿಕೆಯಿಂದ ಪ್ರಾಣ ಉಳಿದಿದೆ
ಶಿವಮೊಗ್ಗ : ಬೈಕ್ ಮೇಲೆ ಚಿರತೆಯೊಂದು ಎಗರಿ ಕೂದಲೆಳೆ ಅಂತರದಲ್ಲಿ ವ್ಯಕ್ತಿಯೊಬ್ಬರು ಪಾರಾದ ಘಟನೆ ಹೊಸನಗರದಲ್ಲಿ ನಡೆದಿದೆ. ಇಲ್ಲಿನ ರಾಣೆಬೆನ್ನೂರು – ಬೈಂದೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ದಾಳಿಯಿಂದ ತಪ್ಪಿಸಿಕೊಂಡವರನ್ನು ಪುರೋಹಿತರಾಗಿರುವ ಸುಬ್ರಹ್ಮಣ್ಯ ನಾವುಡ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಹೊಸನಗರದಿಂದ ನಗರಕ್ಕೆ ಬರುತ್ತಿದ್ದ ಸುಬ್ರಹ್ಮಣ್ಯ ನಾವುಡ ರಾಣೆಬೆನ್ನೂರು – ಬೈಂದೂರು ಹೆದ್ದಾರಿಯಲ್ಲಿ ದರ್ಗಾ ಹೆರಗೂಡಿಗೆ ಬರುತ್ತಿದ್ದಂತೆ ಶೂಲದ ಗುಡ್ಡದ ಕಡೆಯಿಂದ ಬೈಕ್ ಮೇಲೆ ಚಿರತೆಯೊಂದು ಜಿಗಿದಿದೆ. ಆದರೆ ಚಿರತೆಗೆ ಗುರಿ ತಪ್ಪಿ ಬೈಕ್ ಮುಂಭಾಗಕ್ಕೆ ಬಂದಿದೆ. ಈ ವೇಳೆ ಚಿರತೆ ಗರ್ಜಿಸುವುದನ್ನು ಕಂಡ ನಾವುಡ ಗಾಬರಿಯಾಗಿದ್ದಾರೆ. ಈ ವೇಳೆ ಏನೂ ಮಾಡಲು ತೋಚದೆ ಹಾರ್ನ್ ಬಾರಿಸಿ ಕಿರುಚಲಾರಂಭಿಸಿದ್ದಾರೆ. ಇದರಿಂದ ಗಾಬರಿಗೊಂಡ ಚಿರತೆ ಓಡಿ ಹೋಗಿದೆ.
Discussion about this post