ಕೇಸರಿ ಶಾಲಿನ ( kesari shawl ) ಮೂಲಕವೇ ಅಧಿಕಾರ ಪಡೆದುಕೊಂಡ ಮಂದಿ ವಿಧಾನಸೌಧದಲ್ಲಿ ನಡೆದುಕೊಂಡ ರೀತಿ ಟೀಕೆ ಗುರಿಯಾಗಿದೆ
ಬೆಂಗಳೂರು : ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ನಿಂತು ಹಲವು ವರ್ಷಗಳಾಯ್ತು. ಇದೀಗ ಜಾತಿ, ಬಣ್ಣದ ವಿಚಾರದಲ್ಲಿ ರಾಜಕೀಯ ಮಾಡುತ್ತೇವೆ.ಅದರಲ್ಲೂ ಕೇಸರಿಯನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗೇ ನೋಡಿದರೆ ಹಿಂದೂ ಸಮಾಜದ ಪ್ರತಿಯೊಂದು ಹಬ್ಬ ಹರಿದಿನಗಳಂದು ( kesari shawl ) ಕೇಸರಿ ಧ್ವಜ, ಕೇಸರಿ ಬಾವುಟ, ಕೇಸರಿ ಬಟ್ಟೆ ಬಳಸುವುದು ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ರಾಜಕೀಯವಾಗಿ ಬಳಕೆಯಾಗಿತ್ತು ಇತ್ತೀಚಿನ ವರ್ಷಗಳಿಂದ. ಕರಾವಳಿಯ ಜಾತ್ರೆ, ನೇಮ ಕೋಲಗಳ ಸಂದರ್ಭದಲ್ಲಿ ಕೇಸರಿ ಬಣ್ಣದ ವಸ್ತುಗಳಿಂದಲೇ ಅಲಂಕರಿಸಲಾಗುತ್ತಿತ್ತು. ಅದಕ್ಕೆ ಪಕ್ಷ ಬೇಧವಿರಲಿಲ್ಲ.
ಆದರೆ ಇಂದು ವಿಧಾನಸೌಧದಲ್ಲಿ ಬಿಜೆಪಿಯ ಶಾಸಕರು ಕೇಸರಿ ಶಾಲನ್ನು ಮೋಜಿಗೆ ಬಳಸಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ರಾಷ್ಟ್ರಪತಿ ಚುನಾವಣೆ ಸಲುವಾಗಿ ಶಾಸಕರು ವಿಧಾನಸೌಧಕ್ಕೆ ಬಂದಿದ್ದರು. ಬಹುತೇಕ ಬಿಜೆಪಿಯ ಶಾಸಕರು ಕೇಸರಿ ಶಾಲಿನೊಂದಿಗೆ ಪ್ರವೇಶ ಕೊಟ್ಟಿದ್ದರು.
ಇದನ್ನೂ ಓದಿ : Mangalsutra madras high court : ಮಾಂಗಲ್ಯ ಬಿಚ್ಚಿಡುವುದು ಪತಿಗೆ ನೀಡುವ ಮಾನಸಿಕ ಹಿಂಸೆ : ತಮಿಳುನಾಡು ಹೈಕೋರ್ಟ್
ಇದೇ ಸಂದರ್ಭದಲ್ಲಿ ಮತದಾನ ಮುಗಿಸಿ ಬಂದ ಹೆಬ್ಬಾಳ ವಿಧಾನಸಬಾ ಕ್ಷೇತ್ರ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಹಾಗೂ ಬಿಜೆಪಿ ಶಾಸಕರು ಮುಖಾಮುಖಿಯಾಗಿದ್ದಾರೆ. ಹಾಗೇ ಮಾತುಕತೆ ಮುಗಿಸಿ ಹೋಗಿದ್ರೆ ಪರವಾಗಿರಲಿಲ್ಲ. ಬದಲಾಗಿ ಸುರೇಶ್ ಅವರ ಹೆಗಲಿಗೆ ಕೇಸರಿ ಶಾಲು ಹಾಕಿ ಎಳೆದಾಡಲಾರಂಭಿಸಿದ್ದಾರೆ. ರಾಜು ಗೌಡ ಮೊದಲು ಕೇಸರಿ ಶಾಲು ಹಾಕಿದ್ರೆ ಬಳಿಕ ಗೂಳಿಹಟ್ಟಿ ಶೇಖರ್ ಸರದಿ, ಇದಕ್ಕೆ ರೇಣುಕಾಚಾರ್ಯ ಸಾಥ್ ಕೊಟ್ಟಿದ್ದಾರೆ. ಬೈರತಿ ಸುರೇಶ್ ಕೇಸರಿ ಶಾಲು ಬೇಡ ಬೇಡ ಅಂದ್ರು ಒತ್ತಾಯ ಪೂರ್ವಕವಾಗಿ ಹಾಕಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಶಾಸಕರ ಆಟದಲ್ಲಿ ಕೇಸರಿ ಶಾಲು ನಲುಗಿದ್ದು ಮಾತ್ರ ಸತ್ಯ. ಕೇಸರಿ ಶಾಲು ಆಟಿದ ವಸ್ತುವಾಗಿದ್ದು ಮಾತ್ರ ವಿಪರ್ಯಾಸ.
ಉಚ್ಚೆ ಹೊಯ್ಯುವ ವಿಚಾರಕ್ಕೆ ಬಾರ್ ನಲ್ಲಿ ಕಿತ್ತಾಡಿಕೊಂಡ ಎರಡು ರೌಡಿ ಗ್ಯಾಂಗ್
ಮಚ್ಚು ಹಿಡಿದವರಿಗೆ ಕಿತ್ತಾಡಲು ಕಾರಣಗಳೇ ಬೇಕಿಲ್ಲ. ( bengaluru rowdies ) ಅದರಲ್ಲೂ ಖಾಕಿ ಭಯವಿಲ್ಲದೆ ಮರೆಯುತ್ತಿರುವ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ
ಬೆಂಗಳೂರು : ಬಾರ್ ಒಂದರ ಶೌಚಾಲಯದಲ್ಲಿ ಮೂತ್ರ ಹೊಯ್ಯುವಾಗ ಇಬ್ಬರು ರೌಡಿಗಳ ( bengaluru rowdies ) ನಡುವೆ ಪ್ರಾರಂಭವಾದ ಜಗಳ ಅತಿರೇಕಕ್ಕೆ ಹೋದ ಘಟನೆ ನಗರದ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರಸ್ಪರ ಬಿಯಲ್ ಬಾಟಲಿಯಲ್ಲಿ ಹೊಡೆದಾಡಿಕೊಂಡ ರೌಡಿಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ( 25 ) ರಾಘವೇಂದ್ರ ತನ್ನ ಸ್ನೇಹಿತರಾದ ಆಕಾಶ್ ಮತ್ತು ನವೀನ್ ಜೊತೆಗೆ ಸೆವೆನ್ ಹಿಲ್ಸ್ ಬಾರ್ ಗೆ ತೆರಳಿದ್ದರು. ಇದೇ ಬಾರ್ ಗೆ ಶ್ರೀರಾಮಪುರ ಠಾಣೆಯ ರೌಡಿ ಶೀಟರ್ ಯಶವಂತ (24) ಕೂಡಾ ಬಂದಿದ್ದ.
ರಾತ್ರಿ12.15ರ ಸುಮಾರಿಗೆ ರಾಘವೇಂದ್ರ ಮೂತ್ರ ವಿಸರ್ಜನೆ ಸಲುವಾಗಿ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಇದ್ದ ಮತ್ತೊಬ್ಬ ರೌಡಿ ಶೀಟರ್ ಯಶವಂತ್, ನನ್ನ ಯಾಕೆ ಗುರಾಯಿಸ್ತೀಯಾ ಎಂದು ಕಿರಿಕ್ ತೆಗೆದಿದ್ದಾನೆ. ಅಷ್ಟಕ್ಕೆ ಶುರುವಾದ ಜಗಳ ಮಾತಿಗೆ ಮಾತು ಬೆಳೆದು ಹೊಡೆದಾಟ ತನಕ ಬಂದಿದೆ. ಈ ವೇಳೆ ಯಶವಂತ್ ಬಿಯರ್ ಬಾಟಲಿಯಿಂದ ರಾಘವೇಂದ್ರನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಯಶವಂತ್ ಸಹಚರರು ರಾಘವೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ರಾಘವೇಂದ್ರ ಮತ್ತು ಆತನ ಸಹಚರರು ಯಶವಂತ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಹೀಗೆ ಎರಡು ಗುಂಪುಗಳ ಕೆಲ ಕಾಲ ಬಾರ್ ನಲ್ಲಿ ಪ್ರದರ್ಶನ ತೋರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಗೊಂಡ ರೌಡಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ 5 ಮಂದಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
Discussion about this post