ಕೊರೋನಾ ಕಾಲದಲ್ಲಿ ಪ್ರಾರಂಭವಾದ ಕಾಲಮಿತಿ ಯಕ್ಷಗಾನ ( Kateel Yakshagana) ಇದೀಗ ರೆಗ್ಯುಲರ್ ಆಗೋದು ಪಕ್ಕಾ ಆಗಿದೆ
ಮಂಗಳೂರು : ಕರಾವಳಿಯ ಆರಾಧನಾ ಕಲೆ ಕಾಲಕ್ಕೆ ತಕ್ಕಂತೆ ಬದಲಾವಣೆಯ ಹೊಸ್ತಿಲಲ್ಲಿ ನಿಂತಿದೆ. ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಕಾಡಲಾರಂಭಿಸಿದ ಸಂದರ್ಭದಲ್ಲಿ, ಇಡೀ ರಾತ್ರಿ ನಡೆಯುತ್ತಿದ್ದ ಯಕ್ಷಗಾನವನ್ನು ( Kateel Yakshagana) ಕಾಲಮಿತಿಗೆ ತರಲಾಯಿತು. ಸಂಜೆ ಪ್ರಾರಂಭವಾದ್ರೆ ಮಧ್ಯರಾತ್ರಿ ಕಳೆಯುವಷ್ಟು ಹೊತ್ತಿಗೆ ಮಂಗಳ ಹಾಡಲಾಗುತ್ತಿತ್ತು.
ಕೊರೋನಾ ಕಾಲದಲ್ಲಿ ಸೂರ್ಯ ನಡುನೆತ್ತಿಯಲ್ಲಿ ಇರುವ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ ಪ್ರಾರಂಭಿಸಲಾಗಿತ್ತು. ಇದರ ಬೆನ್ನಲ್ಲೇ ಧ್ವನಿ ವರ್ಧಕ ಹೋರಾಟದ ಬಿಸಿ ಯಕ್ಷಗಾನಕ್ಕೂ ತಟ್ಟಿದೆ.
ಇದನ್ನೂ ಓದಿ : Saipura bagh palace : ರಾಜಸ್ಥಾನದಲ್ಲಿ ರಾಜ್ಯ ಮರ್ಯಾದೆ ತೆಗೆದ ಅಧಿಕಾರಿಗಳು : ತಹಶೀಲ್ದಾರ್, ಎಸ್ಐ ಬಂಧನ
ರಾತ್ರಿ 10.30ರ ನಂತರ 50 ಡೆಸಿಬಲ್ ಗಿಂತ ಹೆಚ್ಚು ಧ್ವನಿ ವರ್ಧಕ ಬಳಸಬಾರದು ಅನ್ನುವ ಸರ್ಕಾರ ಆದೇಶ ಇದೀಗ ದೇವಸ್ಥಾನಗಳಿಗೂ ತಲುಪಿದೆ. ಈ ಹಿನ್ನಲೆಯಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಾಯಿಸುವುದು ಅನಿವಾರ್ಯವಾಗಿತ್ತು.
ಇದರ ಮುಂದಿನ ಭಾಗವಾಗಿ ಕರಾವಳಿಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಸಲ್ಪಡುತ್ತಿರುವ ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ಬದಲಾಯಿಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ದೇವಿಯ ಸನ್ನಿಧಾನದಲ್ಲಿ ಹೂ ಪ್ರಶ್ನೆ ಇಡಲಾಗಿದ್ದು, ಕಾಲಮಿತಿ ಯಕ್ಷಗಾನಕ್ಕೆ ದೇವಿಯಿಂದ ಒಪ್ಪಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಕಾಲಮಿತಿ ಯಕ್ಷಗಾನ ಮಾಡುವ ಬಗ್ಗೆ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದ್ದು, ಸಂಜೆ 5 ಗಂಟೆಯಿಂದ 10.30ರ ತನಕ ಯಕ್ಷಗಾನ ನಡೆಸಲು ನಿರ್ಧರಿಸಲಾಗಿದೆ. ಕಾಲಮಿತಿ ಯಕ್ಷಗಾನ ಹೇಗಿರಬೇಕು ಅನ್ನುವ ಕುರಿತಂತೆ ಮುಂದಿನ ದಿನಗಳಲ್ಲಿ ರೂಪುರೇಷೆಗಳು ರೂಪುಗೊಳ್ಳಲಿದೆ.
Discussion about this post