ಬೆಂಗಳೂರು : ಕೊರೋನಾ ಮೂರನೇ ಅಲೆಯ ಅಬ್ಬರದ ನಡುವೆ ಹೇರಲಾಗಿದ್ದ ನಿರ್ಬಂಧಗಳನ್ನು ಈಗಾಗಲೇ ಸಡಿಲಗೊಳಿಸಲಾಗಿದೆ. ಮೊನ್ನೆ ಮೊನ್ನೆ ವಿಕೇಂಡ್ ಕರ್ಫ್ಯೂ ರದ್ದುಗೊಳಿಸಿದ್ದ ಸರ್ಕಾರ, ಮುಂದುವರಿದ ಭಾಗವಾಗಿ ನೈಟ್ ಕರ್ಫ್ಯೂ ಸಡಿಲಗೊಳಿಸಿದೆ. ಇಂದಿನಿಂದ ನೈಟ್ ಕರ್ಫ್ಯೂ ರದ್ದು ಆದೇಶ ಜಾರಿಯಾಗಲಿದ್ದು, ರಾಜ್ಯಾದ್ಯಂತ ಹಲವು ನಿರ್ಬಂಧಗಳು ಸಡಿಲಗೊಳ್ಳಲಿದೆ.
ಹೀಗಾಗಿ ಬೆಂಗಳೂರಿನಲ್ಲಿ ಮುಚ್ಚಲ್ಪಟ್ಟಿದ್ದ ಶಾಲೆಗಳು ಇಂದಿನಿಂದ ತೆರೆದುಕೊಳ್ಳಲಿದೆ.. ಶಾಲಾ ತರಗತಿಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಲಿದ್ದು, ಹೋಟೆಲ್, ಬಾರ್, ರೆಸ್ಟೋರೆಂಟ್ ಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾಚರಿಸಬಹುದಾಗಿದೆ.
ಜೊತೆಗೆ ದೇಗುಲಗಳಲ್ಲಿ ಸೇವೆಗಳು ಪುನಾರಂಭಗೊಳ್ಳಲಿದ್ದು, ಸರ್ಕಾರಿ ಕಚೇರಿಗಳು ಶೇ 100ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಲಿದೆ. ಇನ್ನು ಹೊರಾಂಗಣ ವಿವಾಹಕ್ಕೆ 300 ಮತ್ತು ಒಳಾಂಗಣ ವಿವಾಹಕ್ಕೆ 200 ಜನರ ಮಿತಿ ಹೇರಲಾಗಿದೆ.
ಈ ನಡುವೆ ಚಿತ್ರಮಂದಿರಗಳಿಗೆ ಶೇ 50ರಷ್ಟು ನಿರ್ಬಂಧ ವಿಧಿಸಿರುವುದು ಗಾಂಧಿನಗರದ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರರಂಗದ ಗಣ್ಯರು ಕೂಡಾ ಈಗಾಗಲೇ ಈ ಸಂಬಂಧ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಹೀಗಾಗಿ ಚಿತ್ರಮಂದಿರಗಳನ್ನು ಶೇ100ರಷ್ಟು ಭರ್ತಿ ಮಾಡುವ ಸಂಬಂಧ ಇಂದು ಆದೇಶ ಹೊರ ಬೀಳುವ ಸಾಧ್ಯತೆಗಳಿದೆ.
Discussion about this post