ಬಿಸಿ ನಾಗೇಶ್ ಶಿಕ್ಷಣ ಸಚಿವರಾದ ವೇಳೆ ನಿರೀಕ್ಷೆಗಳು ಸಾಕಷ್ಟಿತ್ತು. ಆದರೆ ಸರಳ, ಸಜ್ಜನ ಅಂದ ಮಾತ್ರಕ್ಕೆ ಉತ್ತಮ ಸಚಿವರಾಗಲು ಸಾಧ್ಯವಿಲ್ಲ ಅನ್ನುವುದಕ್ಕೆ ನಾಗೇಶ್ ಉದಾಹರಣೆ. ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವ ( karnataka text book row) ಇಲಾಖೆಯಲ್ಲಿ ನಾಗೇಶ್ ಮಾಡಿದ್ದು ಬರೀ ಎಡವಟ್ಟು
ಬೆಂಗಳೂರು :ಶಿಕ್ಷಣ ಇಲಾಖೆಯಲ್ಲಿ ಸಾಲು ಸಾಲು ಆಡಳಿತ ವೈಫಲ್ಯಗಳ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರನ್ನು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಸೂಚಿಸಿ ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ರುಪ್ಸಾ ( Registered Unaided Private Schools Management Association, Karnataka, (RUPSA ) ಪ್ರಧಾನಿ ನರೇಂದ್ರ ಮೋದಿಯವರ ಮೊರೆ ಹೋಗಿದೆ.karnataka text book row :
ಈ,ಸಂಬಂಧ ಪತ್ರ ಬರೆದಿರುವ RUPSA ಪಠ್ಯ ಪುಸ್ತಕ ವಿವಾದ ಸೇರಿದಂತೆ ಸಾಲು ಸಾಲು ಆಡಳಿತ ವೈಫಲ್ಯದ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಎಂದು ಸಂಘಟನೆ ಮುಖ್ಯಸ್ಥರು ಆಗ್ರಹಿಸಿದ್ದಾರೆ. ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬರೆದಿರುವ ಪತ್ರದಲ್ಲಿ
ಇದನ್ನೂ ಓದಿ : Fake call center in bangalore : ಬೆಂಗಳೂರಿನಲ್ಲಿ ಕೂತು ವಿಶ್ವದ ದೊಡ್ಡಣ್ಣನಿಗೆ ವಂಚನೆ : ನಕಲಿ ಕಾಲ್ ಸೆಂಟರ್ ನ ಅಸಲಿ ಕಹಾನಿ
“ ರಾಜ್ಯದಲ್ಲಿ ಪ್ರತೀ ಮಕ್ಕಳಿಗೂ ಶಿಕ್ಷಣ ನೀಡುವುದು ಸರ್ಕಾರ ಕರ್ತವ್ಯ. ಆದರೆ ಕರ್ನಾಟಕದಲ್ಲಿ ಈ ಬಗ್ಗೆ ಕನಿಷ್ಟ ಜ್ಞಾನವಿಲ್ಲದ, ಪಕ್ಕಾ ವ್ಯಾಪಾರಿ ಮನೋಭಾವ ಹೊಂದಿರುವ ವ್ಯಕ್ತಿ ಮಂತ್ರಿಯಾಗಿರುವುದರಿಂದ ಇದು ಈಡೇರುತ್ತಿಲ್ಲ. ಹೀಗಾಗಿ ಅವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿಯವರಿಗೆ ಸೂಚಿಸಿ ಎಂದು ಅವರು ಆಗ್ರಹಿಸಿದ್ದಾರೆ.
ಹಾಗೇ ನೋಡಿದರೆ ಮೊನ್ನೆ ಮೊನ್ನೆ ಶಾಲಾ ಮಕ್ಕಳಿಗೆ ಶೂ ವಿತರಣೆ ವಿಚಾರದಲ್ಲಿ ಮಾತನಾಡಿದಾಗಲೇ ಬಿಸಿ ನಾಗೇಶ್ ವರ ರಾಜೀನಾಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡೆಯಬೇಕಾಗಿತ್ತು.
ಕನ್ಹಯ್ಯಾ ಹಂತಕ SDPI ಸದಸ್ಯ
ಕರ್ನಾಟಕ ಮತ್ತು ಕೇರಳದಲ್ಲಿ ಹುಟ್ಟಿದ ವಿವಾದಿತ ಪಿಎಫ್‌ಐ ಸಂಘಟನೆ ಕ್ರಮೇಣ ದೇಶದ ವಿವಿಧೆಡೆ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಇದೀಗ Kanhaiya lal murder case ನಲ್ಲೂ SDPI -PFI ಹೆಸರು ಕೇಳಿ ಬಂದಿದೆ.
ನವದೆಹಲಿ : ಬಿಜೆಪಿ ನೂಪುರ್ ಶರ್ಮಾ ಪರ ನಿಂತ ಕಾರಣಕ್ಕೆ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿದ ಆರೋಪಿ ರಿಯಾಜ್ ಅತ್ತರ್ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಸದಸ್ಯ ಎಂದು ಗೊತ್ತಾಗಿದೆ.
ಇದರೊಂದಿಗೆ ಇದೇ ಪ್ರಕರಣದಲ್ಲಿ ಬಂಧಿತನಾದ ಮತ್ತೊಬ್ಬ ಆರೋಪಿ ಫರ್ಹಾದ್ ಮೊಹಮ್ಮದ್ ಶೇಖ್ ಆಲಿಯಾಸ್ ಬಬ್ಲಾ ಕೂಡಾ SDPI ನಂಟು ಹೊಂದಿರುವುದಾಗಿ National Investigation Agency ( NIA ) ಪತ್ತೆ ಹಚ್ಚಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, 2019 ರಿಯಾಜ್ ಅತ್ತರ್ 2019ರಲ್ಲಿ ( SDPI ) ಸೇರ್ಪಡೆಯಾಗಿದ್ದ.
Discussion about this post