2022ನೇ ಸಾಲಿನ SSLC ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
ಫೆಭ್ರವರಿ.21ರಂದು ಪರೀಕ್ಷೆ ಪ್ರಾರಂಭವಾಗಲಿದ್ದು 26ರಂದು ಅಂತ್ಯವಾಗಲಿದೆ.
ಫೆಬ್ರವರಿ 21ರಂದು ಪ್ರಥಮ ಭಾಷೆ
ಫೆಬ್ರವರಿ22ರಂದು ಸಮಾಜ ವಿಜ್ಞಾನ
ಫೆಬ್ರವರಿ 23ರಂದು ದ್ವಿತೀಯ ಭಾಷೆ
ಫೆಬ್ರವರಿ 24ರಂದು ಗಣಿತ
ಫೆಬ್ರವರಿ 25ರಂದು ತೃತೀಯ ಭಾಷೆ ಹಾಗೂ
ಫೆಬ್ರವರಿ 26ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ
ಸಾಲ ವಾಪಸ್ ಕೇಳಿದ ಮಹಿಳೆಯನ್ನು ಗುಂಡಿಕ್ಕಿ ಕೊಂದ ಪಾಪಿ : ಬಿಜೆಪಿ ನಾಯಕನಿಂದ ದುಷ್ಕೃತ್ಯ
ಕೊಟ್ಟ ಸಾಲವನ್ನು ವಾಪಸ್ ಕೇಳಿದ ಕಾರಣಕ್ಕೆ ಬಿಜೆಪಿ ನಾಯಕನೊಬ್ಬ ಮಹಿಳೆಯನ್ನು ಗುಂಡಿಕ್ಕಿ ಕೊಂದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ : ಕೊಟ್ಟ ಹಣವನ್ನು ವಾಪಸ್ ಕೊಡಿ ಎಂದು ಕೇಳಿದ ಮಹಿಳೆಯನ್ನೇ ಬಿಜೆಪಿ ನಾಯಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಘಟನೆ ಬೆಳಗಾವಿಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶೈಲಾ ಸುಬೇದಾರ್ ಎಂದು ಗುರುತಿಸಲಾಗಿದೆ.
ಈ ಶೈಲಾ ಸುಬೇದಾರ್ ಸಂಕೇಶ್ವರ ಪಟ್ಟಣದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಳು. ಹೀಗೆ ಶೈಲಾ ಕಡೆಯಿಂದ ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಉಮೇಶ್ ಕಾಂಬಳೆ 25 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಸಾಲ ಪಡೆದು ಹಲವು ತಿಂಗಳು ಕಳೆದರೂ ಅಸಲು ಬಿಡಿ ಬಡ್ಡಿ ಕೂಡಾ ಬರಲಿಲ್ಲ.
ಹೀಗಾಗಿ ಬಡ್ಡಿ ಸಮೇತ ಸಾಲ ವಾಪಾಸ್ ಕೊಡುವಂತೆ ಶೈಲಾ, ಕಾಂಬಳೆಯನ್ನು ಒತ್ತಾಯಿಸಿದ್ದಾಳೆ. ಈ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಬಿಜೆಪಿ ನಾಯಕ ಜನವರಿ 16ರಂದು ಶೈಲಾ ಸುಬೇದಾರ್ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಈ ನಡುವೆ ಕೊಲೆ ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಸಂಕೇಶ್ವರ ಪೊಲೀಸರು ಉಮೇಶ ಕಾಂಬಳೆಯನ್ನು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
Discussion about this post