ಬೆಂಗಳೂರು : ಕೊರೋನಾ ಮೂರನೇ ಅಲೆಯ ಆತಂಕದ ನಡುವೆ ರಾಜ್ಯದಲ್ಲಿ ಇಂದಿನಿಂದ 3ನೇ ಡೋಸ್ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯ ಆರೋಗ್ಯ ಇಲಾಖೆ ಇದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಎರಡು ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡವರು 3ನೇ ಡೋಸ್ ಪಡೆಯಬಹುದಾಗಿದೆ.
ಹೀಗಾಗಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ಅರ್ಹರಾಗಿದ್ದು, ಜೊತೆಗೆ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರು ಕೂಡಾ 3ನೇ ಡೋಸ್ ಪಡೆಯಬಹುದಾಗಿದೆ.
ಇನ್ನು ಮೂರನೇ ಡೋಸ್ ಅಭಿಯಾನಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ( ಈಗಿನ ಅಟಲ್ ಬಿಹಾರಿ ವಾಜಪೇಯೆ ವೈದ್ಯಕೀಯ ಕಾಲೇಜು ) ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವು, ವಿಧಾನಸಭಾ ಕ್ಷೇತ್ರವಾರು ಶಾಸಕರು ತಮ್ಮ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ 3ನೇ ಡೋಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 21 ಲಕ್ಷ ಮಂದಿ ಮೂರನೇ ಡೋಸ್ ಲಸಿಕೆ ಪಡೆಯಲು ಅರ್ಹರಾಗಿದ್ದು , ಈ ಪೈಕಿ 6 ಲಕ್ಷ ಆರೋಗ್ಯ ಕಾರ್ಯಕರ್ತರು , 7 ಲಕ್ಷ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ 8 ಲಕ್ಷ ಮಂದಿ 3ನೇ ಡೋಸ್ ಪಡೆಯಬಹುದಾಗಿದೆ.
Discussion about this post