ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ರಾಜ್ಯದ ಕೊರೋನಾ ಇತಿಹಾಸದಲ್ಲಿ ದಾಖಲೆಯ ಸೋಂಕಿತರು ಭಾನುವಾರ ಪತ್ತೆಯಾಗಿದ್ದಾರೆ. 2ನೇ ಅಲೆಯ ಸಂದರ್ಭದಲ್ಲಿ ಮೇ 5 ರಂದು 50112 ಸೋಂಕಿತರು ಪತ್ತೆಯಾಗಿದ್ದರು. ಇದೀಗ ಆ ದಾಖಲೆ ಮುರಿದಿದ್ದು, ಜನವರಿ 23ರ ಭಾನುವಾರ 50210 ಪ್ರಕರಣಗಳು ದಾಖಲಾಗಿವೆ. 19 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
2ನೇ ಅಲೆಗೆ ಹೋಲಿಸಿದರೆ ಸೋಂಕು ಪ್ರಸರಣ ವೇಗ ಸಿಕ್ಕಾಪಟ್ಟೆ ತೀವ್ರವಾಗಿದೆ. ಹೀಗಾಗಿ ಭಾನುವಾರ ಅರ್ಧ ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಈಗಾಗಲೇ ತಜ್ಞರು ಈ ಸಂಖ್ಯೆ ಲಕ್ಷದ ಗಡಿ ತಲುಪಬಹುದು ಅಂದಿದ್ದಾರೆ. ಒಂದು ವೇಳೆ 3ನೇ ಅಲೆ ತಗ್ಗಲು ಪ್ರಾರಂಭವಾಗದಿದ್ರೆ ತಜ್ಞರು ಲೆಕ್ಕಚಾರಗಳು ಸರಿಯಾಗುತ್ತದೆ.
ಇನ್ನು ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 3,57 ಲಕ್ಷಕ್ಕೆ ಏರಿಕೆಯಾಗಿದ್ದು, ಪಾಸಿಟಿವಿಟಿ ದರ ಶೇ22.77ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು ಭಾನುವಾರದಂದು 26, 299 ಸೋಂಕಿತರು ಪತ್ತೆಯಾಗಿದ್ದಾರೆ. ಈ ಸಂಖ್ಯೆ ಶನಿವಾರ 17, 266 ರಷ್ಟಿತ್ತು.
ಇನ್ನುಳಿದಂತೆ ಮೈಸೂರಿನಲ್ಲಿ 4,359, ತುಮಕೂರಿನಲ್ಲಿ 1963, ಹಾಸನ 1922, ಮಂಡ್ಯ 1455, ಕೊಡಗು ಜಿಲ್ಲೆಯಲ್ಲಿ 1139 ಸೋಂಕಿತರು ಪತ್ತೆಯಾಗಿದ್ದಾರೆ.
Discussion about this post